Select Your Language

Notifications

webdunia
webdunia
webdunia
webdunia

ಮೋದಿ ದೇಶದ ಜನರನ್ನು ಎರಡು ಬಾರಿ ಮೂರ್ಖರನ್ನಾಗಿಸಿದ್ದಾರೆ: ಕಾಂಗ್ರೆಸ್

ಮೋದಿ ದೇಶದ ಜನರನ್ನು ಎರಡು ಬಾರಿ ಮೂರ್ಖರನ್ನಾಗಿಸಿದ್ದಾರೆ: ಕಾಂಗ್ರೆಸ್
ಬಳ್ಳಾರಿ , ಮಂಗಳವಾರ, 27 ಡಿಸೆಂಬರ್ 2016 (17:39 IST)
ಕಪ್ಪು ಹಣ ಹೊರ ತರುವ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನು ಎರಡು ಬಾರಿ ಮೂರ್ಖರನ್ನಾಗಿ ಮಾಡಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಟೀಕಿಸಿದ್ದಾರೆ. 
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಲೋಕಸಭೆ ಚುನಾವಣೆಯ ಪ್ರಚಾರದ ಸಮಯದಲ್ಲಿ ವಿದೇಶದಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ವಾಪಸ್ ತಂದು ಜನತೆಗೆ ಹಂಚುತ್ತೇನೆ ಎಂದು ಹೇಳಿ ಮೂರ್ಖರನ್ನಾಗಿಸಿದ್ದರು. ಇದೀಗ, ಗರಿಷ್ಟ ಮುಖಬೆಲೆಯ ನೋಟ್ ಬ್ಯಾನ್ ಮಾಡುವ ಮೂಲಕ ಭ್ರಷ್ಟಾಚಾರ ನಿರ್ಮೂಲನೆಯಾಗುತ್ತದೆಂದು ದೇಶದ ಜನತೆಯನ್ನು ಮತ್ತೊಮ್ಮೆ ಮೂರ್ಖರನ್ನಾಗಿಸಿದ್ದಾರೆಂದು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.  
 
ತೆರಿಗೆ ಬದಲಾವಣೆ ಮಾಡುವ ಮೂಲಕ ಕಪ್ಪು ಹಣವನ್ನು ತಡೆಯಬಹುದು. ಆದರೆ, ಅದನ್ನು ಬಿಟ್ಟು ನೋಟು ನಿಷೇಧದ ನಿರ್ಧಾರ ಕೈಗೊಂಡಿದ್ದು ತಪ್ಪು. ಇದರಿಂದ ದೇಶದ ಆರ್ಥಿಕತೆ ಹದಗೆಡುವಂತಾಗಿದೆ ಎಂದು ಕಿಡಿಕಾರಿದರು.
 
ಕಪ್ಪು ಹಣ ಇರುವುದು ಅಧಿಕಾರಿಗಳು ಹಾಗೂ ರಾಜಕಾರಣಿಗಳ ಬಳಿಯೇ ಹೊರತು ಜನಸಾಮಾನ್ಯರ ಬಳಿಯಿಲ್ಲ. ಆದರೆ ನೋಟ್ ಬ್ಯಾನ್ ಎಫೆಕ್ಟ್‌ನಿಂದ ಜನಸಾಮಾನ್ಯರೇ ಅತೀ ಸಂಕಷ್ಟಕ್ಕೆ ಸಿಗುಕಿದ್ದಾರೆ. ಪ್ರಧಾನಿ ಮೋದಿ ದೇಶದಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ವಾಗ್ದಾಳಿ ನಡೆಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ 100 ಕೋಟಿ ಜನರಿಗೆ ಇಂಟರ್‌ನೆಟ್‌ ಸೌಲಭ್ಯವಿಲ್ಲ, ಡಿಜಿಟಲ್ ಇಂಡಿಯಾ ಸಾಧ್ಯನಾ?