Select Your Language

Notifications

webdunia
webdunia
webdunia
webdunia

ಬಿಜೆಪಿಯಿಂದ ಶೋಭಾರನ್ನು ಹೊರಹಾಕಿದಿದ್ರೆ ಶೋಭೆ ತರಲ್ಲ: ದಿನೇಶ್ ಗಂಡೂರಾವ್

ಬಿಜೆಪಿಯಿಂದ ಶೋಭಾರನ್ನು ಹೊರಹಾಕಿದಿದ್ರೆ ಶೋಭೆ ತರಲ್ಲ: ದಿನೇಶ್ ಗಂಡೂರಾವ್
ಬೆಂಗಳೂರು , ಸೋಮವಾರ, 7 ನವೆಂಬರ್ 2016 (14:12 IST)
ಬಿಜೆಪಿಯಿಂದ ಶೋಭಾರನ್ನು ಹೊರಹಾಕಿ ಇಲ್ಲವಾದರೆ ಬಿಜೆಪಿಗೆ ಶೋಭೆ ತರುವುದಿಲ್ಲ. ಶವದ ಮೇಲೆ ರಾಜಕೀಯ ಮಾಡುವುದನ್ನು ಬಿಡಿ ಎಂದು ಬಿಜೆಪಿ ನಾಯಕರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
 
ಮನಬಂದಂತೆ ಹೇಳಿಕೆ ನೀಡುತ್ತಿರುವ ಕರಂದ್ಲಾಜೆ, ರುದ್ರೇಶ್ ಹತ್ಯೆ ಕುರಿತಂತೆ ತಮ್ಮ ಬಳಿ ದಾಖಲೆಗಳಿವೆ ಎಂದು ಹೇಳಿಕೆ ನೀಡಿದ್ದರಿಂದ ಮೊದಲು ಅವರನ್ನು ತನಿಖೆಗೊಳಪಡಿಸಬೇಕು ಎಂದು ಗುಡುಗಿದರು.
 
ಕರಂದ್ಲಾಜೆ ಹಿಂದೆ ಸಚಿವ ಜಾರ್ಜ್ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದರು. ಸುಳ್ಳು ಆರೋಪಗಳಿಂದಾಗಿ ಜಾರ್ಜ್ ರಾಜೀನಾಮೆ ನೀಡಿದ್ದರು. ಆರ ಆರೋಪ ಸೆಕ್ಸಸ್ ಆಗದ ಹಿನ್ನೆಲೆಯಲ್ಲಿ ಇದೀಗ ಸಚಿವ ರೋಷನ್ ಬೇಗ್‌ರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
 
ಶಿಸ್ತಿನ ಪಕ್ಷ, ನಾವು ಇತರ ಪಕ್ಷಗಳಿಗಿಂತ ಭಿನ್ನ ಎಂದು ಹೇಳಿಕೊಳ್ಳುವ ಬಿಜೆಪಿ ಮೊದಲು ಇಂತಹ ಸುಳ್ಳು ಆರೋಪ ಮಾಡಿ ಪಕ್ಷದ ಇಮೇಜಿಗೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿರುವ ಸಂಸದೆ ಶೋಭಾ ಕರಂದ್ಲಾಜೆಯವರನ್ನು ಪಕ್ಷದಿಂದ ಕೂಡಲೇ ಹೊರಹಾಕಬೇಕು ಎಂದು ಬಿಜೆಪಿ ಮುಖಂಡರಿಗೆ ಕಿವಿಮಾತು ಹೇಳಿದರು.
 
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೂಡಲೇ ಶೋಭಾ ಕರಂದ್ಲಾಜೆ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಸೂಕ್ತ. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಬಿಜೆಪಿಯ ಯಾವುದೇ ಆರೋಪಗಳಿಗೆ ಬೆಲೆ ಇರುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಸರಕಾರ ನನಗೆ ನೀಡಿ, ಸಾಕ್ಷಿ ನೀಡುತ್ತೇನೆ: ಕರಂದ್ಲಾಜೆ ಸವಾಲ್