ಪಿಸ್ತೂಲ್ ಬಾಯಿಗಿಟ್ಟು ಫೈರಿಂಗ್ : ಬೆಚ್ಚಿಬಿದ್ದ ಭೀಮಾತೀರ

ಮಂಗಳವಾರ, 10 ಸೆಪ್ಟಂಬರ್ 2019 (16:24 IST)
ಭೀಮಾತೀರದಲ್ಲಿ ರಕ್ತಸಿಕ್ತ ಅಧ್ಯಾಯದ ಪುಟಗಳು ಮತ್ತೆ ಮುಂದುವರಿದಿವೆ.

ಹಳೇಯ ವೈಷಮ್ಯಕ್ಕೆ ಮತ್ತೊಬ್ಬ ಯುವಕ ಹೆಣವಾಗಿದ್ದು, ಭೀಮಾತೀರವನ್ನು ನಡುಗಿಸಿದೆ.

ಯುವಕ ಸೈಬಣ್ಣನನ್ನ ಆರೋಪಿ ರವಿ ತಳವಾರ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲ, ಬಾಯಿಗೆ ಪಿಸ್ತೂಲ್ ಇಟ್ಟು ಗುಂಡು ಹಾರಿಸಿ ಹತ್ಯೆ ಮಾಡೋ ಮೂಲಕ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಕಲಬುರಗಿ ಜಿಲ್ಲೆಯ ಕರ್ಜಗಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿ ಪತ್ತೆಗೆ ಮುಂದಾಗಿದ್ದಾರೆ. ಅಫಜಲಪುರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಆರೋಗ್ಯ ಸಚಿವರ ತವರಲ್ಲೇ ಮೂಲೆ ಸೇರಿರೋ 108