ಟಿಕೆಟ್ ಇಲ್ಲದೆ ಪ್ರಯಾಣ ಬೆಳೆಸಿದ್ದ ಪಾರಿವಾಳಗಳಿಗೆ 900 ರೂ. ದಂಡ ಹಾಕಿದ ಕೆಎಸ್ ಆರ್ ಟಿಸಿ

ಗುರುವಾರ, 20 ಜೂನ್ 2019 (12:48 IST)
ಬೆಂಗಳೂರು : ಕೆಎಸ್ ಆರ್ ಟಿಸಿ ಬಸ್ ನಲ್ಲಿ ಟಿಕೆಟ್ ತೆಗೆದುಕೊಳ್ಳದೆ ಪ್ರಯಾಣ ಬೆಳೆಸಿದ್ದಕ್ಕೆ ಪಾರಿವಾಳಗಳಿಗೆ 900 ರೂ. ದಂಡ ಹಾಕಲಾಗಿದೆ.
ಲಿಂಗಸೂರುನಿಂದ ರಾಯಚೂರುಗೆ ಪ್ರಯಾಣ ಬೆಳೆಸಿದ್ದ ವ್ಯಕ್ತಿಯೊಬ್ಬರು, ಒಂದ್ ಬಾಕ್ಸ್ ನಲ್ಲಿ ಪಾರಿವಾಳಗಳನ್ನು ಹಿಡಿದುಕೊಂಡಿದ್ದರು. ಅವರು ಆ  ಪಾರಿವಾಳಗಳಿಗೆ ಟಿಕೆಟ್ ತೆಗೆದುಕೊಂಡಿರಲಿಲ್ಲ.ಅದಕ್ಕಾಗಿ ಚೆಕ್ಕಿಂಗ್ ಮಾಡಲು ಬಂದ ಇನ್ಸ್ ಪೆಕ್ಟರ್ ಒಂದು ಬಾಕ್ಸ್ ಪಾರಿವಾಳಗಳಿಗೆ ಭರ್ತಿ 900 ರೂ. ದಂಡ ಹಾಕಿದ್ದಾರೆ.


ಈ ಹಿಂದೆ ಕೋಳಿಗಳಿಗೆ ಟಿಕೆಟ್ ತೆಗೆದುಕೊಂಡಿಲ್ಲ ಎಂದು ಪ್ರಯಾಣಿಕನೊಬ್ಬನಿಗೆ 100 ರೂ. ದಂಡ ಹಾಕಿದ್ದ ಕೆಎಸ್‍ಆರ್ ಟಿಸಿ ಇದೀಗ ಪಾರಿವಾಳಗಳಿಗೆ 900 ರೂ ದಂಡ ವಿಧಿಸಿರುವುದು ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಜೆಡಿಎಸ್ ಶಾಸಕರ ಕ್ಷೇತ್ರಕ್ಕೆ ಸಿಎಂ ಯಿಂದ ಸಿಕ್ಕಿದೆ ಕೋಟಿ ಕೋಟಿ ಅನುದಾನ