Select Your Language

Notifications

webdunia
webdunia
webdunia
webdunia

ದಿವ್ಯಾಂಗ ಮಕ್ಕಳು ದೇವರ ಸಮಾನ ತಿಳಿಯಿರಿ

ದಿವ್ಯಾಂಗ ಮಕ್ಕಳು ದೇವರ ಸಮಾನ ತಿಳಿಯಿರಿ
Bangalore , ಬುಧವಾರ, 7 ಡಿಸೆಂಬರ್ 2016 (08:55 IST)
ಬುದ್ಧಿಮಾಂದ್ಯ ಮಕ್ಕಳಿಗೆ ಪಾಠ ಕಲಿಸುವುದು ಕಷ್ಟಕರ ಕೆಲಸವಾಗಿದ್ದು, ಶಿಕ್ಷಕರು ಈ ದಿವ್ಯಾಂಗ ಮಕ್ಕಳನ್ನು ದೇವರ ಸಮಾನವೆಂದು ತಿಳಿದು ಉತ್ತಮ ಶಿಕ್ಷಣ ಒದಗಿಸಬೇಕೆಂದು ಆರ್.ಎಂ.ಎಸ್.ಎ. ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಶರಣಪ್ಪ ಕೋಬಾಳಕರ್ ಹೇಳಿದರು.
 
ಅವರು ಕಲಬುರಗಿಯ ಪರಿವರ್ತನಾ ಬುದ್ಧಿಮಾಂದ್ಯ ಶಾಲೆಯಲ್ಲಿ ಕಲಬುರಗಿ ತಾಲೂಕುನ ಬ್ಲಾಕ್ ಮಟ್ಟದ ವಿಸ್ವ ವಿಕಲಚೇತನರ ದಿನಾಚರಣೆಯಲ್ಲಿ ಮಾತನಾಡಿದರು. ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡರಂಗಪ್ಪ ಕಾರ್ಯಕ್ರಮ ಉದ್ಘಾಟಿಸಿ ದಿವ್ಯಾಂಗರಿಗೆ ಅನುಕಂಪ ಬೇಡ ಅವಕಾಶ ಕಲ್ಪಿಸುವುದು ಅತ್ಯವಶ್ಯಕ. ಅವರನ್ನು ಹೀನಾಯವಾಗಿ ಕಾಣದೆ ಶಿಕ್ಷಣದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಪ್ರೋತ್ಸಾಹಿಸಬೇಕೆಂದರು.
 
ಮಹಾನಿಂಗಪ್ಪ ಮೂಲಗೆ, ಅಮಾತೆಪ್ಪ, ಗಿರಿಜಾ ರೇವೂರ, ಬಾಬು ಮೌರ್ಯ ಮತ್ತಿತರರು ಕಾಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹಣಮಂತ ಸಿ.ರೇವಣೋರ ಸ್ವಾಗತಿಸಿದರು. ಕರಬಸಪ್ಪ ಚೇಂಗಟಿ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಕ್ರೀಡೆಗಳಲ್ಲಿ ವಿಜೇತರಾದ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಎಸ್.ಸಿ./ಎಸ್.ಟಿ ಅನುದಾನ ಸಮರ್ಪಕ ಬಳಕೆಗೆ ವಿಶೇಷ ಕಾನೂನು