Select Your Language

Notifications

webdunia
webdunia
webdunia
webdunia

ರೇಷನ್‌ ಕಾರ್ಡ್‌ ಹಿಂಭಾಗ ಏಸು ಫೋಟೋ..!

ರೇಷನ್‌ ಕಾರ್ಡ್‌ ಹಿಂಭಾಗ ಏಸು ಫೋಟೋ
ರಾಜ್ಯದಲ್ಲಿ ಧರ್ಮ ದಂಗಲ್ ನಡುವೆ ಮತ್ತೊಂದು ವಿವಾದ ಬೆಳಕಿಗೆ ಬಂದಿದೆ. ಪಡಿತರ ಚೀಟಿ ಹಿಂಭಾಗ ಏಸು ಕ್ರಿಸ್ತನ ಫೋಟೋ ಮುದ್ರಿಸಲಾಗಿದೆ, ರಾಮನಗರ ಜಿಲ್ಲೆಯ ಡಿಕೆಶಿ ಸ್ವಗ್ರಾಮ ದೊಡ್ಡ ಆಲಹಳ್ಳಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ದೊಡ್ಡ ಆಲಹಳ್ಳಿಯ ನ್ಯೂ ಪುಷ್ಪ ಸ್ಟೂಡಿಯೋದಲ್ಲಿ ಮುದ್ರಣವಾಗಿರುವುದು ಸಾಬೀತಾಗಿದೆ. ಇನ್ನು ಈ ವಿಚಾರ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾಧಿಕಾರಿಗಳಿಗೆ ಶ್ರೀರಾಮಸೇನೆ ಮುಖಂಡರು ಮನವಿ ನೀಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ವೈರಲ್ ಆಗಿರೋ ಫೋಟೋ ಬಗ್ಗೆ ತನಿಖೆಗೆ ಕನಕಪುರ ತಹಶೀಲ್ದಾರ್​ ಮುಂದಾಗಿದ್ದಾರೆ. ಪೊಲೀಸರ ಜೊತೆಗೂಡಿ  ತಹಶೀಲ್ದರ್ ವಿಶ್ವನಾಥ್ ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ವೈರಲ್ ಆದ ಫೋಟೋ ‌ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಮಮಂದಿರ ಸ್ಫೋಟಕ್ಕೆ PFI ಸಂಚು..!