Daily Horoscope

ಫೋನ್ ಟ್ಯಾಪಿಂಗ್ : ಆ ವ್ಯವಹಾರ ಮಾಡಿಲ್ಲ, ಕಳ್ಳ ನಾನಲ್ಲ ಅಂತಂದ ಪಕ್ಷೇತರ ಶಾಸಕ

Webdunia
ಶನಿವಾರ, 17 ಆಗಸ್ಟ್ 2019 (16:03 IST)
ರಾಜ್ಯದಲ್ಲಿ ಫೋನ್ ಟ್ಯಾಪಿಂಗ್ ವಿಷಯ ಸದ್ದು ಮಾಡುತ್ತಿರುವಾಗಲೇ ಪಕ್ಷೇತರ ಶಾಸಕರೊಬ್ಬರು ಹೊಸ ಸುದ್ದಿ ಸ್ಫೋಟ ಮಾಡಿದ್ದಾರೆ.

ಕೋಲಾರದ ಮುಳಬಾಗಲಿನಲ್ಲಿ ಪಕ್ಷೇತರ ಶಾಸಕ ಎಚ್.ನಾಗೇಶ್ ಹೇಳಿಕೆ ನೀಡಿದ್ದಾರೆ. ಭಾರತ ದೇಶದತ್ತ ಎಲ್ಲರೂ ಕಣ್ಣು ಬಿಟ್ಟು ನೋಡುವಂತೆ ಮಾಡುತ್ತಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಹಾಗಾಗಿ ಅವರ ಹೆಜ್ಜೆಯಲ್ಲಿ ಸಾಗೋಣ, ಅವರ ಸಾಧನೆಗಳನ್ನ ಹೇಳೋಣ ಎಂದು ಬಿಜೆಪಿಗೆ ಬೆಂಬಲ ನೀಡಿದ್ದೇನೆ ಎಂದಿದ್ದಾರೆ.

ಇಂದಿರಾಗಾಂಧಿ ನಂತರ ದೇಶವನ್ನ ಯಾರು ಸರಿ ಮಾಡ್ತಾರೆ? ಎಂಬ ಆತಂಕ ಇತ್ತು, ಮೋದಿ ಬಂದ ನಂತರ ದೇಶ ಸರಿಯಾಗಿದೆ. ಮೋದಿ ಯಂತಹ ಲೀಡರ್ ಇರುವಾಗ ನಮಗೆ, ನಮ್ಮ ದೇಶಕ್ಕೆ ಯಾವುದೇ ಭಯವಿಲ್ಲ. ಕಾಲ ಬದಲಾದಂತೆ ಎಲ್ಲವೂ ಬದಲಾಗುತ್ತೆ, ಅಭಿವೃದ್ದಿಗಾಗಿ ನಾನು ಈ ನಿರ್ಧಾರ ಮಾಡಿದ್ದೇನೆ ಅಂತ ಹೇಳಿದ್ರು.

ಸುಭದ್ರ ಸರ್ಕಾರ ಮಾಡುವವರಿಗೆ ನನ್ನ ಬೆಂಬಲ, ಕ್ಷೇತ್ರದ ಮುಖಂಡರು, ಮತದಾರರ ನಿರ್ಧಾರ‌ದಂತೆ ಈ ಹೆಜ್ಜೆ ಇಟ್ಟಿದ್ದೇನೆ ಅಂತ ಹೇಳಿದ್ದಾರೆ.

ಸುಭದ್ರ ಸರ್ಕಾರಕ್ಕೆ ನಾನೇನ್ ವಾಚ್ ಮೆನ್ ಆಗಿರೋಕ್ಕಾಗಲ್ಲ, ಸುಬಧ್ರವಾಗಿರುವ ಸರ್ಕಾರಕ್ಕೆ ನನ್ನ ಬೆಂಬಲ ಎಂದ  ಪಕ್ಷೇತರ ಶಾಸಕ ಎಚ್.ನಾಗೇಶ್, ದೂರವಾಣಿ ಕದ್ದಾಲಿಕೆ ಸಾಧ್ಯತೆ ಇದೆ ಎಚ್ಚರವಾಗಿರಿ ಎಂದು ಹೇಳಿದ್ರು‌‌. ಆದ್ರೂ ಕೂಡ ನಾನು ನೇರವಾಗಿ ದೂರವಾಣಿಯಲ್ಲಿ ಮಾತನಾಡುತ್ತಿದ್ದೆ, ನಾನೇನು ಅ ವ್ಯವಹಾರ ಮಾಡಿಲ್ಲ‌, ಕಳ್ಳನೂ ಅಲ್ಲ ಅಂತ ಹೇಳಿದ್ದಾರೆ.  


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್‌ನೊಳಗೆ ಯಾವುದೇ ಒಡಕ್ಕಿಲ್ಲ, ಒಗ್ಗಟ್ಟಿನಲ್ಲಿ ಪಕ್ಷ ಸಾಗುತ್ತಿದೆ: ಯುಟಿ ಖಾದರ್‌

ಭಾರತೀಯ ನಾಗರಿಕತೆಯಲ್ಲಿ ಪ್ರಕೃತಿಗೆ ತಾಯಿಯ ಸ್ಥಾನ: ಪ್ರಧಾನಿ ನರೇಂದ್ರ ಮೋದಿ

ಜಾರಿ ನಿರ್ದೇಶನಾಯಕ್ಕೆ ದೂರು ನೀಡಿದ್ದು ಯಾರೆಂದು ಗೊತ್ತು: ಸ್ಪಷ್ಟ ಮಾಹಿತಿಯಿದೆ ಎಂದ ಸಚಿವ ಸತೀಶ್‌ ಜಾರಕಿಹೊಳಿ

ಬ್ರಿಕ್ಸ್ ಶೃಂಗಸಭೆ ವೇಳೆ ಪ್ರಧಾನಿ ಮೋದಿ ಆಯೋಜಿಸಿದ್ದ ಗೌರವ ಭೋಜನಕೂಟಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗೈರು

ಜಾವಾ ಸಮುದ್ರದಲ್ಲಿ 241 ಪ್ರಯಾಣಿಕರಿದ್ದ ಹಡಗು ಸಂಪರ್ಕ ಕಡಿತ: ಹೆಲಿಕಾಪ್ಟರ್‌ ಮೂಲಕ ಹುಡುಕಾಟ

ಮುಂದಿನ ಸುದ್ದಿ
Show comments