Publish Date: Wed, 14 Aug 2019 (11:42 IST)
Updated Date: Wed, 14 Aug 2019 (11:45 IST)
ಬೆಂಗಳೂರು : ಟೆಲಿಫೋನ್ ಕದ್ದಾಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಫೋನ್ ಟ್ಯಾಪಿಂಗ್ ದೊಡ್ಡ ಅಪರಾಧ ಎಂದು ಬಿಜೆಪಿ ಶಾಸಕ ಆರ್.ಅಶೋಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೋನ್ ಟ್ಯಾಪಿಂಗ್ ಆಗಿದೆ ಎಂದು 6 ತಿಂಗಳ ಹಿಂದೆ ನಾನು ಹೇಳಿದ್ದೆ. ರಾಜಕರಣಿಗಳು, ಪತ್ರಕರ್ತರು ಸೇರಿ ಅನೇಕರ ಫೋನ್ ಟ್ಯಾಪ್ ಆಗಿದೆ. ಈ ಬಗ್ಗೆ ನಾವು ಕೂಡ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ. ಫೋನ್ ಕದ್ದಾಲಿಕೆ ಶಿಕ್ಷೆ ನೀಡುವ ಅಧಿಕಾರ ಕಾನೂನಿನಲ್ಲಿ ಇದೆ. ಫೋನ್ ಕದ್ದಾಲಿಕೆ ಮಾಡಿದ ಸರ್ಕಾರ ಈಗ ಇಲ್ಲ ಎಂದು ಹೇಳಿದ್ದಾರೆ.
ಹಾಗೇ ರಾಜ್ಯ ಸರ್ಕಾರ ಫೋನ್ ಕದ್ದಾಲಿಕೆ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದು, ಸಿಎಂ ಯಡಿಯೂರಪ್ಪ ಈ ಬಗ್ಗೆ ಸೂಕ್ತ ತನಿಖೆಗೆ ಆದೇಶಿಸಿದ್ದಾರೆ ಎನ್ನಲಾಗಿದೆ.