Select Your Language

Notifications

webdunia
webdunia
webdunia
Sunday, 6 April 2025
webdunia

ನಗರದಲ್ಲಿ ಇಂದಿನ ಪೆಟ್ರೋಲ್ - ಡಿಸೇಲ್ ದರ ಹೀಗಿದೆ

Petrol and diesel rates in India
bangalore , ಭಾನುವಾರ, 15 ಮೇ 2022 (14:21 IST)
ನಿನ್ನೆಗೆ ಹೋಲಿಸಿದರೆ ರಾಜ್ಯದಲ್ಲಿ ಬಹುತೇಕ ಇಂದು ಇಂಧನ ಬೆಲೆಗಳಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ಕಳೆದ ಕೆಲ ದಿನಗಳಿಂದ ಭಾರತದಲ್ಲಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರ(Petrol-Diesel Price)ಗಳು ಅತಿಶಯವಾದ ಏರಿಳಿತಗಳಿಲ್ಲದೆ ಸ್ಥಿರವಾಗಿವೆ.
 
ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ (Bengaluru) ಕಳೆದ ಕೆಲವು ದಿನಗಳಿಂದ ಇಂಧನ ಬೆಲೆ ಸ್ಥಿರವಾಗಿದೆ. ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude oil) ಬೆಲೆಯೂ ಇಳಿಯುತ್ತಿಲ್ಲ, ಇತ್ತ ದೇಶದಲ್ಲಿ ನಿತ್ಯ ಒಂದಿಷ್ಟು ಪೈಸೆಗಳಷ್ಟು ಪೆಟ್ರೋಲ್-ಡಿಸೆಲ್ ಬೆಲೆಯಲ್ಲಿ ಏರಿಳಿತ ಆಗುತ್ತಲೇ ಇದೆ. ಕಳೆದ ಕೆಲ ದಿನಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ ಹೆಚ್ಚಳವಾಗುತ್ತಿರುವುದು ಸುಳ್ಳಲ್ಲ. ಆದಾಗ್ಯೂ, ಕಳೆದ ಕೆಲ ದಿನಗಳಿಂದ ಬೆಲೆಯಲ್ಲಿ ಸ್ಥಿರತೆ ಕಂಡುಬರುತ್ತಿದ್ದು, ಇಂದಿನ ಬೆಲೆಯಲ್ಲಿ ಕೊಂಚ ವ್ಯತ್ಯಾಸವಾಗಿದೆ.
 
ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಳಿತವಾಗುತ್ತಿದ್ದು, ಬಹುತೇಕವಾಗಿ ಒಂದೇ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದೆ.
 
ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಮುಕ್ತಾಯವಾಗುವ ಸೂಚನೆಯೂ ಕಾಣುತ್ತಿಲ್ಲವಾದ್ದರಿಂದ ತೈಲದ ಬೆಲೆ ಮೇಲೆ ಪರಿಣಾಮ ಬೀರಿದೆ.
 
ರಾಜಧಾನಿ ಬೆಂಗಳೂರು ನಗರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದೂ ಸಹ ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 111.09 ಆಗಿದ್ದರೆ ಡೀಸೆಲ್ ದರ ರೂ. 94.79 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.110.85, ರೂ. 120.51, ರೂ. 115.12 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 100.94, ರೂ. 104.77, ರೂ. 99.83 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 105.41 ಆಗಿದ್ದರೆ ಡೀಸೆಲ್ ದರ ರೂ. 96.67 ಆಗಿದೆ.
 
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
 
ಬಾಗಲಕೋಟೆ - ರೂ. 111.59 (00)
ಬೆಂಗಳೂರು - ರೂ. 111.09 (00)
ಬೆಂಗಳೂರು ಗ್ರಾಮಾಂತರ - ರೂ. 110.74 (42 ಪೈಸೆ ಇಳಿಕೆ)
ಬೆಳಗಾವಿ - ರೂ. 111.42 (22 ಪೈಸೆ ಇಳಿಕೆ)
ಬಳ್ಳಾರಿ - ರೂ. 112.33 (70 ಪೈಸೆ ಇಳಿಕೆ)
ಬೀದರ್ - ರೂ. 111.69 (06 ಪೈಸೆ ಏರಿಕೆ)
ವಿಜಯಪುರ - ರೂ. 111.21 (40 ಪೈಸೆ ಏರಿಕೆ)
ಚಾಮರಾಜನಗರ - ರೂ. 111.18 (14 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - ರೂ. 111.56 (47 ಪೈಸೆ ಏರಿಕೆ)
ಚಿಕ್ಕಮಗಳೂರು - ರೂ. 112.36 (41 ಪೈಸೆ ಇಳಿಕೆ)
ಚಿತ್ರದುರ್ಗ - ರೂ. 112.51 (35 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 110.29 (63 ಪೈಸೆ ಇಳಿಕೆ)
ದಾವಣಗೆರೆ - ರೂ. 112.61 (6 ಪೈಸೆ ಇಳಿಕೆ)
ಧಾರವಾಡ - ರೂ. 110.84 (12 ಪೈಸೆ ಇಳಿಕೆ)
ಗದಗ - ರೂ. 111.92 (60 ಪೈಸೆ ಏರಿಕೆ)
ಕಲಬುರಗಿ - ರೂ. 111.32 (8 ಪೈಸೆ ಏರಿಕೆ)
ಹಾಸನ - ರೂ. 111.10 (6 ಪೈಸೆ ಇಳಿಕೆ)
ಹಾವೇರಿ - ರೂ. 111.71 (00)
ಕೊಡಗು - ರೂ. 111.85 (00)
ಕೋಲಾರ - ರೂ. 111.03 (00)
ಕೊಪ್ಪಳ - ರೂ. 111.99 (00)
ಮಂಡ್ಯ - ರೂ. 110.85 (31 ಪೈಸೆ ಇಳಿಕೆ)
ಮೈಸೂರು - ರೂ. 110.79 (5 ಪೈಸೆ ಇಳಿಕೆ)
ರಾಯಚೂರು - ರೂ. 111.86 (81 ಪೈಸೆ ಏರಿಕೆ)
ರಾಮನಗರ - ರೂ. 111.56 (12 ಪೈಸೆ ಏರಿಕೆ)
ಶಿವಮೊಗ್ಗ - ರೂ. 112.90 (00)
ತುಮಕೂರು - ರೂ. 112.13 (68 ಪೈಸೆ ಇಳಿಕೆ)
ಉಡುಪಿ - ರೂ. 110.60 (39 ಪೈಸೆ ಇಳಿಕೆ)
ಉತ್ತರ ಕನ್ನಡ - ರೂ. 113.30 (2 ರೂ. 15 ಪೈಸೆ ಏರಿಕೆ)
ಯಾದಗಿರಿ - ರೂ. 111.53 (36 ಪೈಸೆ ಇಳಿಕೆ)
 
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
 
ಬಾಗಲಕೋಟೆ - ರೂ. 95.26
ಬೆಂಗಳೂರು - ರೂ. 94.79
ಬೆಂಗಳೂರು ಗ್ರಾಮಾಂತರ - ರೂ. 94.48
ಬೆಳಗಾವಿ - ರೂ. 95.11
ಬಳ್ಳಾರಿ - ರೂ. 96.56
ಬೀದರ್ - ರೂ. 95.35
ವಿಜಯಪುರ - ರೂ. 94.92
ಚಾಮರಾಜನಗರ - ರೂ. 94.87
ಚಿಕ್ಕಬಳ್ಳಾಪುರ - ರೂ. 95.21
ಚಿಕ್ಕಮಗಳೂರು - ರೂ. 95.91
ಚಿತ್ರದುರ್ಗ - ರೂ. 95.94
ದಕ್ಷಿಣ ಕನ್ನಡ - ರೂ. 94.03
ದಾವಣಗೆರೆ - ರೂ. 96.04
ಧಾರವಾಡ - ರೂ. 94.59
ಗದಗ - ರೂ. 95.56
ಕಲಬುರಗಿ - ರೂ. 95.02
ಹಾಸನ - ರೂ. 94.67
ಹಾವೇರಿ - ರೂ. 95.37
ಕೊಡಗು - ರೂ. 95.44
ಕೋಲಾರ - ರೂ. 94.74
ಕೊಪ್ಪಳ - ರೂ. 95.62
ಮಂಡ್ಯ - ರೂ. 94.57
ಮೈಸೂರು - ರೂ. 94.52
ರಾಯಚೂರು - ರೂ. 95.52
ರಾಮನಗರ - ರೂ. 95.21
ಶಿವಮೊಗ್ಗ - ರೂ. 96.34
ತುಮಕೂರು - ರೂ. 95.73
ಉಡುಪಿ - ರೂ. 94.31
ಉತ್ತರ ಕನ್ನಡ - ರೂ. 96.69
ಯಾದಗಿರಿ - ರೂ. 95.21

Share this Story:

Follow Webdunia kannada

ಮುಂದಿನ ಸುದ್ದಿ

ಶಾಲಾರಂಭಕ್ಕೆ ಕೌಂಟ್ ಡೌನ್ ಶುರು