Daily Horoscope
✕

ದೇವರಿಗೆ ದಿಗ್ಬಂಧನ ಹಾಕಿದ ಜನರು!

Webdunia
ಮಂಗಳವಾರ, 18 ಜೂನ್ 2019 (15:26 IST)
ಸಚಿವರಿಗೆ, ಶಾಸಕರಿಗೆ ದಿಗ್ಭಂಧನ ಹಾಕೋದನ್ನು ಕೇಳಿದ್ದೇವೆ. ನೋಡಿದ್ದೇವೆ. ಆದರೆ ಈ ಊರಲ್ಲಿ ಜನರು ದೇವರಿಗೆ ದಿಗ್ಭಂಧನ ಹಾಕಿದ್ದಾರೆ.

ಮಳೆಗಾಗಿ ದೇವರಿಗೆ ಜಲ ದಿಗ್ಭಂಧನ ಹಾಕಿದ ಗ್ರಾಮಸ್ಥರು ಗಮನ ಸೆಳೆದಿದ್ದಾರೆ. ದೇವರ ಗರ್ಭ ಗುಡಿಯೊಳಗೆ ನೀರು ಹಾಕಿ ದ್ವಾರ ಮುಚ್ಚಿದ್ದಾರೆ ಗ್ರಾಮಸ್ಥರು.

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ಅಪರೂಪದ ಘಟನೆ ನಡೆದಿದೆ.

ಎಂ ಕೆ ಹುಬ್ಬಳ್ಳಿ ಪಟ್ಟಣದಲ್ಲಿರುವ ಐತಿಹಾಸಿಕ ಪ್ರಸಿದ್ಧ ಸೂರ್ಯನಾರಾಯಣ ದೇವಸ್ಥಾನದಲ್ಲಿ ಘಟನೆ ನಡೆದಿದೆ. ಸೂರ್ಯ ನಾರಾಯಣ ದೇವಸ್ಥಾನದಲ್ಲಿ  ನೀರು ತುಂಬಿಸಿ ಬಾಗಿಲು ಹಾಕಿದ್ದಾರೆ ಗ್ರಾಮಸ್ಥರು. ತೀವ್ರ ಬರಗಾಲ ಹಿನ್ನೆಲೆ ಮಳೆಯಾಗದೇ ಇದ್ದುದರಿಂದ  ಈ ರೀತಿ ದೇವಸ್ಥಾನದಲ್ಲಿ ನೀರು ತುಂಬಿಸಿದರೆ ಮಳೆಯಾಗುತ್ತೆ ಎಂಬ ನಂಬಿಕೆ ಜನರಲ್ಲಿದೆ.

ಮೊದಲಿಂದಲು ನಡೆದುಕೊಂಡು ಬಂದ ಹಳೆ ಸಂಪ್ರದಾಯ ಇದಾಗಿದೆ. ದೇವಸ್ಥಾನದ ಗರ್ಭಗುಡಿಗೆ ನೀರು ತುಂಬಿ ದೇವರಿಗೆ ಮಳೆಗಾಗಿ ಪ್ರಾರ್ಥಿಸಿದ್ದಾರೆ ಗ್ರಾಮಸ್ಥರು. ಈ ಹಿಂದೆ ಕೂಡ ಮಳೆಯಾಗದೇ ಇದ್ದಾಗ ದೇವಸ್ಥಾನದಲ್ಲಿ ನೀರು ತುಂಬಿಸಿದ್ದರು ಗ್ರಾಮಸ್ಥರು. ನಂತರ ಉತ್ತಮ ಮಳೆಯಾಯಾಗಿದ್ದ  ಇತಿಹಾಸವಿದೆ ಎನ್ನುತ್ತಾರೆ ಜನರು. ಗರ್ಭ ಗುಡಿಯಲ್ಲಿ ನೀರಲ್ಲಿ ಮುಳಗಿದ್ದಾನೆ ಸೂರ್ಯ ನಾರಾಯಣ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments