Select Your Language

Notifications

webdunia
webdunia
webdunia
webdunia

ಶುದ್ಧ ಕುಡಿಯುವ ನೀರು ಸಿಗದೇ ಜನರ ಪರದಾಟ, ಅಧಿಕಾರಿಗಳ ವಿರುದ್ಧ ಆಕ್ರೋಶ

ಶುದ್ಧ ಕುಡಿಯುವ ನೀರು ಸಿಗದೇ ಜನರ ಪರದಾಟ, ಅಧಿಕಾರಿಗಳ ವಿರುದ್ಧ ಆಕ್ರೋಶ
bangalore , ಬುಧವಾರ, 6 ಜುಲೈ 2022 (20:41 IST)
ಬೆಂಗಳೂರಿನಲ್ಲಿರೋ ಸಮಸ್ಯೆಗಳು ಒಂದಾ..ಎರಡಾ? ಕುಡಿಯೋಕೂ ಶುದ್ದ ನೀರು ಸಿಗ್ತಿಲ್ಲ ರಾಜಧಾನಿಯಲ್ಲಿ. ಕಲುಷಿತ ನೀರು ಕುಡಿದು ಓರ್ವ ಮಹಿಳೆ ಸಾವನ್ನಪ್ಪಿದ್ದು, ಆ ಏರಿಯಾದ ಜನ, ಸ್ಥಳೀಯ ಜನಪ್ರತಿನಿಧಿಗಳ ಮೇಲೆ ಕೆಂಡಮಂಡಲರಾಗಿದ್ದಾರೆ. ಬೆಂಗಳೂರಲ್ಲಿ ಶುದ್ಧ ಕುಡಿಯುವ ನೀರಿಗೂ ಪರದಾಡುವಂತಾಗಿದೆ. ವಿಜಯನಗರ ವಿಧಾನಸಭಾ ಕ್ಷೇತ್ರದ ಗಾಳಿ ಆಂಜನೇಯ ದೇವಸ್ಥಾನ ವಾರ್ಡ್ನ ಸಂಜಯನಗರದಲ್ಲಿ ಕಾವೇರಿ ನೀರು ಕಲುಷಿತವಾಗಿ ಬರ್ತಿದೆ. ಕಲುಷಿತ ನೀರು ಕುಡಿದ ಏರಿಯಾದ ಜನರಿಗೆ, ವಾಂತಿ- ಭೇದಿ,  ಹೊಟ್ಟೆ ನೋವು ಶುರುವಾಗಿದೆ. 
 
ವಾ : ಈ ನೀರು ನೋಡಿ ಒಮ್ಮೆ. ಇದನ್ನ ಕುಡಿಯೋಕೆ ಆಗುತ್ತಾ. ಗಲೀಜು ತುಂಬಿರುವ ಈ ನೀರು ಕುಡಿದ್ರೆ, ಜೀವಕ್ಕೆನೆ ಕುತ್ತು. ಜಲಮಂಡಳಿಯಿಂದ ಪೂರೈಕೆಯಾಗುವ ಈ ಕಾವೇರಿ ನೀರನ್ನೇ ಸಂಜಯನಗರ ಕಾಲೋನಿ ಜನ ಕುಡಿತಾರೆ. ಮನೆಗಳ ಕೆಲಸಕ್ಕೂ ಬಳಸ್ತಾರೆ. ಈ ಕುಡಿದ ಬಳಿಕ ವಾಂತಿ, ಬೇದಿ, ಹೊಟ್ಟೆನೋವು, ಲೂಸ್ ಮೋಷನ್ ಆಗ್ತಿದೆ ನಾನು ಎರಡು ಬಾರಿ ಆಸ್ಪತ್ರೆ ಸೇರಿದ್ದಿನಿ. ಒಂದು ತಿಂಗಳ ಹಿಂದೆ ಆರೋಗ್ಯ ಹಾಳಾಗಿ ನಮ್ ಏರಿಯಾದ ಲಕ್ಷ್ಮಮ್ಮ ಮೃತಪಟ್ಟರು ಸ್ಥಳೀಯರು ಆಕ್ರೋಶ ಹೊರ ಹಾಕ್ತಿದ್ದಾರೆ. ಏರಿಯಾದಲ್ಲಿ ಶುದ್ದ ಕುಡಿಯುವ ನೀರಿನ್ನ ಪೂರೈಕೆ ಮಾಡಲು ಪ್ರತ್ಯೇಕ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಈ ಟ್ಯಾಂಕರ್ ನಲ್ಲೂ ಇದೇ ಕಲುಷಿತ ನೀರು. ಮಕ್ಕಳು, ವಯೋವೃದ್ದರು,  ನೀರು ಬಿಸಿ ಮಾಡ್ಕೊಂಡೇ ಕುಡಿತಾರೆ. ಇದೇ ಏರಿಯಾದಲ್ಲಿ ಶುದ್ಧಕುಡಿಯುವ ನೀರಿನ ಘಟಕವಿದ್ರೂ ಅದು ಕಾರ್ಯನಿರ್ವಹಿಸ್ತಿಲ್ಲ. ಹೀಗಾಗಿ ಪ್ರತ್ಯೇಕ ಟ್ಯಾಂಕರ್, ಕುಡಿಯುವ ನೀರಿನ ಘಟಕದಿಂದ ನೀರು ತರಿಸಿಕೊಳ್ತಿದ್ದಾರೆ. ನಲ್ಲಿ ಆನ್ ಮಾಡಿದ್ರೆ ಆರಂಭದ ೧೦ ನಿಮಿಷ ಬರೀ ಕೊಳಚೆ ನೀರೇ ಬರುತ್ತೆ. ಇಂತಹ ನೀರು ಕುಡಿದು ಹೇಗೆ ತಾನೆ ಆರೋಗ್ಯ ಸರಿ ಇರುತ್ತೆ.? ಈ ಭಾಗದ ಸಂಬಂಧಪಟ್ಟ  ಅಧಿಕಾರಿಗಳಾಗ್ಲಿ, ಜನಪ್ರತಿನಿಧಿಗಳಾಗ್ಲಿ  ಇವರೆಗೆ ಸ್ಪಂದಿಸೋದೆ ಇರೋದು ದುರಂತವೇ ಸರಿ.

Share this Story:

Follow Webdunia kannada

ಮುಂದಿನ ಸುದ್ದಿ

ಚಾಮರಾಜಪೇಟೆ ಈದ್ಧಾ ಮೈದಾನ ವಿವಾದ