Select Your Language

Notifications

webdunia
webdunia
webdunia
webdunia

ಬೆಂಗಳೂರಿನ ಜನರಿಗೆ ಬೆನ್ ಬಿಡದೆ ಕಾಡುತ್ತಿದೆ ಗುಂಡಿ ಬೂತ

People of Bangalore are constantly bothered by the Gundi Boota
bangalore , ಶುಕ್ರವಾರ, 10 ಫೆಬ್ರವರಿ 2023 (21:07 IST)
ಐಟಿ ಸಿಟಿ ಜನರಿಗೆ ಗುಂಡಿ ಕಂಟಕ ಮುಗಿಯುತ್ತಿಲ್ಲ.ಒಂದೆಡೆ ಗುಂಡಿ ಮುಚ್ಚಿದ್ರೆ ಮತ್ತೊಂದೆಡೆ ಗುಂಡಿ ಬೀಳುತ್ತದೆ.ವಾಟಾಳ್ ನಾಗರಾಜ್ ರಸ್ತೆಯಲ್ಲಿ ಗುಂಡಿ ಸಂಕಷ್ಟ ಶುರುವಾಗಿದೆ.ಗುಂಡಿ ಬಿದ್ದು ೫ ದಿನ ಕಳೆದರೂ ಬಿಬಿಎಂಪಿ ಮಾತ್ರ ಸರಿಯಾಗಿ ರೆಸ್ಪಾನ್ಸ್ ಮಾಡ್ತಿಲ್ಲ.ಬಿಡಬ್ಲ್ಯು ಎಸ್ ಎಸ್ ಬಿ ಇಂದ ಸ್ಥಳದಲ್ಲಿ ಪೈಪ್ ಕಾಮಗಾರಿ ನಡೆದಿತ್ತು.ಆದ್ರೆ ಒಂದೆಡೆ ನೀರು ತುಂಬಿ ರಸ್ತೆ ಕುಸಿದಿದೆ.ತಕ್ಷಣ ಸ್ಥಳೀಯರು ಬಿಡಬ್ಲ್ಯು ಎಸ್ ಎಸ್ ಬಿ ರವರಿಗೆ ಕಂಪ್ಲೇಂಟ್ ಮಾಡಿದರೂ ಕ್ಯಾರೇ ಅಂತಿಲ್ಲಾ.ಇದು ನಮಗೆ ಬರುವುದಿಲ್ಲವೆಂದು ಬಿಡಬ್ಲ್ಯು ಎಸ್ ಎಸ್ ಬಿಯ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ.
 
ಇನ್ನೂ ಬಿಬಿಎಂಪಿಗೆ ಕಂಪ್ಲೇಂಟ್ ಮಾಡಿದ್ರು ಏನು ಪ್ರಯೋಜನವಿಲ್ಲ ಎಂದು ಸ್ಥಳೀಯರು ಅಸಾಮಾಧಾನ ಹೊರಹಾಕಿದ್ದಾರೆ.ಭಾನುವಾರ ಈ  ಘಟನೆ ನಡೆದಿದ್ರು.ಇನ್ನು ಸ್ಥಳಕ್ಕೆ ಯಾರು ಭೇಟಿ ನೀಡಿಲ್ಲ.ಗುಂಡಿ ಬಿದ್ದು ೫ ದಿನದಲ್ಲಿ ಸರಿ ಸುಮಾರು 5-8 ಜನರು ಗಾಯಗೊಂಡಿದ್ದಾರೆ.ಇದನ್ನು ಕಂಡ ಸ್ಥಳೀಯರು ಗುಂಡಿಯನ್ನು ಕಲ್ಲಿನಿಂದ ಮುಚ್ಚುವ ಪ್ರಯತ್ನ ಮಾಡ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಲಾ ವಾರ್ಷಿಕೋತ್ಸವದಲ್ಲಿ ಅಪ್ಪನ ನೃತ್ಯ