Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯರ ಇನ್ನೊಂದು ಮುಖ ಜನತೆಗೆ ಗೊತ್ತಿಲ್ಲ: ಶ್ರೀನಿವಾಸ್ ಪ್ರಸಾದ್

ಸಿದ್ದರಾಮಯ್ಯರ ಇನ್ನೊಂದು ಮುಖ ಜನತೆಗೆ ಗೊತ್ತಿಲ್ಲ: ಶ್ರೀನಿವಾಸ್ ಪ್ರಸಾದ್
ಮೈಸೂರು , ಮಂಗಳವಾರ, 27 ಡಿಸೆಂಬರ್ 2016 (12:27 IST)
ಮುಖ್ಯಮಂತ್ರಿ ಸಿದ್ದರಾಮಯ್ಯರ ಒಂದು ಮುಖ ಮಾತ್ರ ಗೊತ್ತು. ಆದರೆ, ಅವರ ಇನ್ನೊಂದು ಮುಖ ರಾಜ್ಯದ ಜನತೆಗೆ ಗೊತ್ತಿಲ್ಲ ಎಂದು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. 
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಜಾತಿಗಣತಿಯಲ್ಲಿ ಏನೆಂದು ಬರೆಸಿದ್ದೀರಾ? ನನ್ನ ಧರ್ಮ ಹಿಂದೂ ಎಂದು ಬರೆಸಿಲ್ಲವೇ? ಮತ್ತೇಕೆ ಹಿಂದೂ ಧರ್ಮದಲ್ಲಿ ಸಮಾನತೆ ಇಲ್ಲ ಎಂದು ಹೇಳುತ್ತೀರಾ ಎಂದು ನೇರವಾಗಿ ಪ್ರಶ್ನಿಸಿದರು.
 
ಮೊದಲು ಜಾತ್ಯಾತೀತ ಎಂದರೆ ಏನೆಂದು ತಿಳಿದುಕೊಳ್ಳಿ. ನಜನಗೂಡು ಉಪಚುನಾವಣೆಗೆ ವಿಶ್ವಗರು ಬಸವಣ್ಣ, ಡಾ. ಅಂಬೇಡ್ಕರ್ ಹಾಗೂ ಬುದ್ಧನನ್ನು ಏಕೆ ಎಳೆದು ತರುತ್ತಿದ್ದೀರಾ?. ನಿಮ್ಮ ಕ್ಷೇತ್ರದಲ್ಲಿಯೇ ದಲಿತ ಮಹಿಳೆಯರು ಮಾಡಿದ ಅಡುಗೆಯನ್ನು ತಿನ್ನುತ್ತಿಲ್ಲ. ಅಹಿಂದ ಹೆಸರಿನಲ್ಲಿ ಅಧಿಕಾರ ಹಿಡಿದಿರುವ ಸಿಎಂ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರಾ? ಆ ಸಮಸ್ಯೆಯನ್ನು ಪರಿಹರಿಸಿದ್ದು ನಾವು ಎಂದು ಕಿಡಿಕಾರಿದರು. 
 
ಮಹದೇವಪ್ಪ ಸೂಟಕೇಸ್ ಮಂತ್ರಿ....
 
ರಾಜ್ಯ ಸರಕಾರದಲ್ಲಿ ಎಐಸಿಸಿಗೆ ಸೂಟಕೇಸ್ ಕೊಡಲು ಒಬ್ಬ ಮಂತ್ರಿ ಇದ್ದಾರೆ ಎಂದು ಸಚಿವ ಮಹದೇವಪ್ಪ ಅವರಿಗೆ ಟಾಂಗ್ ನೀಡಿದರು.
 
ನೈತಿಕತೆ ಇಲ್ಲದ ಖರ್ಗೆ.....
 
ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆಗೆ ನೈತಿಕತೆ ಕುಸಿದಿದೆ. ದಲಿತರ ಕುರಿತು ಮಲ್ಲಿಕಾರ್ಜುನ್ ಖರ್ಗೆ ಅವರು ಯಾವತ್ತಾದರೂ ಚರ್ಚಿಸಿದ್ದಾರಾ ಎಂದು ಪ್ರಶ್ನಿಸಿದರು.
 
ಗೃಹ ಸಚಿವ ಮೂಗ, ಕಿವುಡು ಶಾಲೆಯ ಹೆಡ್ ಮಾಸ್ತರ್....
 
ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ ಮೂಗ ಹಾಗೂ ಕಿವುಡರು ಶಾಲೆಯ ಹೆಡ್‌ಮಾಸ್ತರ್‌ನಂತೆ ವರ್ತಿಸುತ್ತಿದ್ದಾರೆ ಎಂದು ಸಚಿವ ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಅಂಗಳದಲ್ಲಿ ರಾಹುಲ್ ಎಸೆದ ಬ್ರಹ್ಮಾಸ್ತ್ರ‌; ಶೀಲಾ ದೀಕ್ಷಿತ್‌ರಿಂದಾಯ್ತು ಠುಸ್ ಪಟಾಕಿ