Select Your Language

Notifications

webdunia
webdunia
webdunia
webdunia

ಮೋದಿ ಅಂಗಳದಲ್ಲಿ ರಾಹುಲ್ ಎಸೆದ ಬ್ರಹ್ಮಾಸ್ತ್ರ‌; ಶೀಲಾ ದೀಕ್ಷಿತ್‌ರಿಂದಾಯ್ತು ಠುಸ್ ಪಟಾಕಿ

Sheila Dikshit
ನವದೆಹಲಿ , ಮಂಗಳವಾರ, 27 ಡಿಸೆಂಬರ್ 2016 (11:47 IST)
ನಾನು ಸಂಸತ್‌ನಲ್ಲಿ ಮಾತನಾಡಿದರೆ ಭೂಕಂಪವಾಗುತ್ತದೆ, ಪ್ರಧಾನಿ ಮೋದಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಿಡಿಸಿದ್ದ ಬಾಂಬ್ ತಿರುಮಂತ್ರವಾಗಿ ಕಾಂಗ್ರೆಸ್ ಪಾಳೆಯದಲ್ಲೇ ಸಿಡಿದಿತ್ತು. 
ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮೋದಿ ಸಹಾರಾ ಕಂಪನಿಯಿಂದ 40 ಕಿಕ್‌ಬ್ಯಾಕ್ ಪಡೆದಿದ್ದರು ಎಂದು ರಾಹುಲ್ ಆರೋಪಿಸಿದ್ದರು. ಅದಕ್ಕೆ ಸಾಕ್ಷ್ಯವಾಗಿ  ಸಹಾರಾ ಡೈರಿಯಲ್ಲಿ ಬರೆದಿರುವ ಹೆಸರಿನ ಪಟ್ಟಿಯನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದರು. ಅದರಲ್ಲಿ  ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹೆಸರು ಕೂಡ ಇತ್ತು. ಹೀಗಾಗಿ ರಾಹುಲ್ ಎಸೆದ ಬಾಂಬ್ ಕಾಂಗ್ರೆಸ್ ಅಂಗಳದಲ್ಲೇ ಸಿಡಿದು ಕಾಂಗ್ರೆಸ್‌ನಲ್ಲೇ ಭೂಕಂಪವನ್ನು ಸೃಷ್ಟಿಸಿತು. ಇನ್ನೊಂದೆಡೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯಾಗಿ ಘೋಷಣೆಯಾಗಿರುವ ಶೀಲಾ ಅವರನ್ನು ಹಣಿಯಲು ಪಕ್ಷದವರೇ ನಡೆಸಿದ ಕುತಂತ್ರ ಎಂಬ ಮಾತುಗಳು ಸಹ ಕೇಳಿ ಬಂದಿತ್ತು. 
 
ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಕಂಡ ಶೀಲಾ ದೀಕ್ಷಿತ್ ರಾಹುಲ್‌ ಎಸೆದ ಬ್ರಹ್ಮಾಸ್ತ್ರವನ್ನು ಠುಸ್ ಪಟಾಕಿಯನ್ನಾಗಿಸಿದ್ದಾರೆ. 
 
ಇದೆಲ್ಲವೂ ಕಪೋಲ ಕಲ್ಪಿತ. ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಸಹಾರಾ ಡೈರಿ ಬಗ್ಗೆ ಸುಪ್ರೀಂಕೋರ್ಟ್ ಈಗಾಗಲೇ ತನ್ನ ಅಭಿಪ್ರಾಯವನ್ನು ತಿಳಿಸಿದ್ದು, ಇದರಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ ಶೀಲಾ. ಈ ಮೂಲಕ ರಾಹುಲ್ ಪ್ರಯೋಗಿಸಿದ ಬಾಣ ಅವರ ಪಾಳೆಯದಿಂದಲೇ ಮೊಂಡಾಗಿದಂತಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಎಂಇಎಸ್ ಪುಂಡರಿಗೆ ಜಿಲ್ಲಾಡಳಿತ ತಕ್ಕ ಪಾಠ