Select Your Language

Notifications

webdunia
webdunia
webdunia
webdunia

ಮೈದಾನದಲ್ಲಿ ಕುಸಿದು ಬಿದ್ದು ಮೃತಪಟ್ಟ ಕ್ಯಾಮರೂನ್ ಫುಟ್ಬಾಲ್ ಆಟಗಾರ

patrick ekeng
ರೊಮಾನಿಯಾ , ಶನಿವಾರ, 7 ಮೇ 2016 (12:31 IST)
ಕ್ಯಾಮರೂನ್ ಅಂತಾರಾಷ್ಟ್ರೀಯ ಆಟಗಾರ ಪ್ಯಾಟ್ರಿಕ್ ಎಕೆಂಗ್ ಮೊದಲ ಡಿವಿಷನ್ ಪಂದ್ಯವಾಡುವಾಗ ಮೈದಾನದಲ್ಲಿ ಕುಸಿದುಬಿದ್ದು ಮೃತಪಟ್ಟಿದ್ದಾರೆ. ರೊಮಾನಿಯಾ ತಂಡ ಡಿನಾಮೊ ಬುಕಾರೆಸ್ಟ್ ಪರ ಆಡುವಾಗ 26 ವರ್ಷದ ಮಿಡ್‌ಫೀಲ್ಡರ್, ಭರವಸೆಯ ಆಟಗಾರ 70ನೇ ನಿಮಿಷದಲ್ಲಿ ವಿಟೋರುಲ್ ವಿರುದ್ಧ ಪಂದ್ಯದಲ್ಲಿ  ಯಾವುದೇ ಆಟಗಾರನ ಜತೆ ಸಂಪರ್ಕ ಹೊಂದದೇ ಮೈದಾನದಲ್ಲಿ ಕುಸಿದುಬಿದ್ದರು.

ಜನವರಿಯಲ್ಲಿ ರೊಮಾನಿಯಾ ಕ್ಲಬ್ ಸೇರಿದ್ದ ಎಕೆಂಗ್ ಅವರನ್ನು ಆಸ್ಪತ್ರೆಗೆ ಸೇರಿಸಿದರೂ  ಚೇತರಿಸಿಕೊಳ್ಳಲು ವಿಫಲರಾದರು. ಬುಕಾರೆಸ್ಟ್ ಕ್ಲಬ್ ಅಭಿಮಾನಿಗಳು ಆಸ್ಪತ್ರೆಯ ಹೊರಗೆ ಸೇರಿ ಆಟಗಾರನ ಸಾವಿಗೆ ಶೋಕ  ಸೂಚಿಸಿದರು. 
 
 ರೊಮಾನಿಯಾಕ್ಕೆ ಆಗಮಿಸುವ ಮುನ್ನ, ಎಕೆಂಗ್ ಅನೇಕ ಐರೋಪ್ಯ ಕ್ಲಬ್‌ಗಳಿಗೆ ಆಡಿದ್ದು, ಫ್ರೆಂಚ್ ಲೀಗ್ 2 ಸೈಟ್ ಲೆ ಮ್ಯಾನ್ಸ್ ತಂಡದ ಪರ ನಾಲ್ಕು ಸೀಸನ್‌‍ ಆಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಬರದ ಬರೆ: ಇಂದು ಪ್ರಧಾನಿ- ಸಿಎಂ ಭೇಟಿ