ಬೆಂಗಳೂರಿಗೆ ಕೇಂದ್ರೀಕೃತ ಪ್ರಾಧಿಕಾರ ರಚನೆಯಾಗಲಿ ಎಂದ ಸಂಸದ

Webdunia
ಬುಧವಾರ, 29 ಮೇ 2019 (15:01 IST)
ಮಳೆ ಅನಾಹುತ ಸೇರಿದಂತೆ ಮಹಾನಗರದ ನಾಗರಿಕರ ಕುಂದು-ಕೊರತೆ ನಿವಾರಿಸಿ ಸಕಾಲಕ್ಕೆ ಸೌಲಭ್ಯ ಕಲ್ಪಿಸಲು ಕೇಂದ್ರೀಕೃತ ಪ್ರಾಧಿಕಾರ ರಚನೆ ಅಗತ್ಯವಾಗಿದೆ. ಹೀಗಂತ ನೂತನ ಬಿಜೆಪಿ ಸಂಸದ ಹೇಳಿದ್ದಾರೆ.

ನೂತನ ಸಂಸದ ಡಿ.ವಿ ಸದಾನಂದಗೌಡ ಸರಣಿ ಟ್ವೀಟ್ ಮೂಲಕ ಈ ವಿಷ್ಯ ಪ್ರತಿಪಾದಿಸಿದ್ದಾರೆ.

ಬೆಂಗಳೂರಿನ ನಾಗರಿಕ ಸೌಲಭ್ಯಗಳ ಕುಂದು ಕೊರತೆಯನ್ನು ಹದ್ದು ಬಸ್ತಿನಲ್ಲಿಡಲು, ಬೆಳೆಯುತ್ತಿರುವ ನಮ್ಮ ನಗರ  ಬೆಂಗಳೂರಿನ ನಾಗರಿಕರಿಗೆ ಕ್ಲಪ್ತ ಸಮಯದಲ್ಲಿ ಬೇಕಾದ ಸೌಲಭ್ಯಗಳನ್ನು ಜಾರಿಗೊಳಿಸಲು ಕೇಂದ್ರೀಕೃತ ಪ್ರಾಧಿಕಾರವೊಂದರ  ರಚನೆ ಅತ್ಯಂತ ಪ್ರಸ್ತುತ ಮತ್ತು ಅತ್ಯಗತ್ಯ. ಈ ಕೇಂದ್ರೀಕೃತ ಪ್ರಾಧಿಕಾರ ರಚನೆಗೆ ಪಕ್ಷಾತೀತ ನಿರ್ಣಯ ಬೇಕು. ಚುನಾಯಿತ ಪ್ರತಿನಿದಿಗಳು, ಸಮರ್ಪಕ ಅಧಿಕಾರಿಗಳು ಮತ್ತು ಕೆಲ ನಾಗರಿಕರನ್ನು ಒಳಗೊಂಡ  ಈ ಪ್ರಾಧಿಕಾರ ನಿಯಮಾನುಸಾರ ರಚನೆಯಾಗಿ ತನ್ನ ಪರಿಮಿತಿಯಲ್ಲಿ ಕಾರ್ಯ ನಿರ್ವಹಿಸಿದಾಗ ಮಾತ್ರ ಬೆಂಗಳೂರನ್ನು ನಾಗರಿಕ ಸೌಲಭ್ಯದಲ್ಲಿ ವಿಶ್ವ ದರ್ಜೆಗೆ ಏರಿಸಲು ಸಾಧ್ಯ ಎಂದು ಟ್ವೀಟ್ ಮಾಡಿದ್ದಾರೆ.

ಬೆಂಗಳೂರಿನ‌ ಬೆಸ್ಕಾಂ,ಬಿಡಬ್ಲ್ಯುಎಸ್ಎಸ್ಬಿ, ಬಿಬಿಎಂಪಿ, ಬಿಟಿಪಿ, ಆರ್ಡಬ್ಲ್ಯುಎ, ಅರಣ್ಯ, ಅಗ್ನಿಶಾಮಕ, ಆರೋಗ್ಯ, ಪರಿಸರ, ಕೆರೆ ಸಂರಕ್ಷಣಾ ಪ್ರಾಧಿಕಾರಗಳನ್ನೊಳಗೊಂಡ ಈ ಕೇಂದ್ರೀಕೃತ ಪ್ರಾಧಿಕಾರ ಮಳೆ ಅನಾಹುತ,  ಯೋಜನೆಗಳ  ಅನುಷ್ಠಾನದಲ್ಲಿ ಆಗಬಹುದಾದ ವಿಳಂಬ, ನಗರ ಅಭಿವೃದ್ಧಿ ಹೆಸರಿನಲ್ಲಿ  ಕಮಿಷನ ಲೂಟಿ ಹೊಡೆಯುತ್ತಿರುವ ಕೆಲ ಪಟ್ಟಭದ್ರ ಹಿತಾಸಕ್ತಿಗಳನ್ನು ಹುಟ್ಟಡಗಿಸಲು ನೆರವಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೊಬೈಲ್‌ನಲ್ಲಿ ಸಂಚಾರ ಸಾಥಿ ಆ್ಯಪ್‌ ಇನ್‌ಸ್ಟಾಲ್‌: ವಿವಾದ ಬೆನ್ನಲ್ಲೇ ಯೂಟರ್ನ್‌ ಹೊಡೆದ ಕೇಂದ್ರ ಸರ್ಕಾರ

ಸೂರಜ್‌ ಬೆನ್ನಲ್ಲೇ ಪ್ರಜ್ವಲ್ ರೇವಣ್ಣಗೂ ಬಿಗ್‌ಶಾಕ್: ಶಿಕ್ಷೆ ಅಮಾನತು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ರಷ್ಯಾ ಅಧ್ಯಕ್ಷ ಪುಟಿನ್ ಭೇಟಿಗೆ ಬಂದೋಬಸ್ತ್ ನಡುವೆ ದೆಹಲಿಯ ಎರಡು ಕಾಲೇಜಿಗೆ ಬಾಂಬ್ ಬೆದರಿಕೆ

ಭಿನ್ನಾಭಿಪ್ರಾಯ ಬಗೆಹರಿದಿದೆ: ಸಿಎಂ ಕುರ್ಚಿ ಗುದ್ದಾಟಕ್ಕೆ ಪರಮೇಶ್ವರ್ ಪ್ರತಿಕ್ರಿಯೆ

ಯಾವತ್ತಾದ್ರೂ ಬಿಟ್ಟು ಕೊಡಲೇ ಬೇಕಾಲ್ವ, ಸಿಎಂ ಆಪ್ತ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ

ಮುಂದಿನ ಸುದ್ದಿ
Show comments