Select Your Language

Notifications

webdunia
webdunia
webdunia
webdunia

ಪರಪ್ಪನ ಅಗ್ರಹಾರ ಅಕ್ರಮ ತನಿಖಾಧಿಕಾರಿಯಾಗಿ ಮುರುಗನ್ ನೇಮಕ

ಪರಪ್ಪನ ಅಗ್ರಹಾರ ಅಕ್ರಮ ತನಿಖಾಧಿಕಾರಿಯಾಗಿ ಮುರುಗನ್ ನೇಮಕ
ಬೆಂಗಳೂರು , ಶನಿವಾರ, 29 ಜನವರಿ 2022 (17:37 IST)
ಪರಪ್ಪನ ಅಗ್ರಹಾರ ಜೈಲು ಭೇಟಿ ಮುಗಿಸಿ ಹೈಕೋರ್ಟ್ ನ್ಯಾಯಧೀಶರು ವಾಪಸ್ ಹೊರಟಿದ್ದಾರೆ. ನ್ಯಾಯಾಧೀಶ ವೀರಪ್ಪ ಮತ್ತು ದಿನೇಶ್ ಕುಮಾರ್ ದಿಢೀರ್ ಭೇಟಿ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲು ಭೇಟಿ ಮುಗಿಸಿ ಹೈಕೋರ್ಟ್ ನ್ಯಾಯಧೀಶರು ವಾಪಸ್ ಹೊರಟಿದ್ದಾರೆ. ನ್ಯಾಯಾಧೀಶ ವೀರಪ್ಪ ಮತ್ತು ದಿನೇಶ್ ಕುಮಾರ್ ದಿಢೀರ್ ಭೇಟಿ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳ ವರದಿಯಿಂದ ಪರಪ್ಪನ ಅಗ್ರಹಾರ ಜೈಲಿಗೆ ದಿಢೀರ್ ಭೇಟಿ ನೀಡಲಾಗಿದೆ. ಭೇಟಿ ವೇಳೆ ಯಾವುದೇ ಅಕ್ರಮ‌ ಕಂಡು ಬಂದಿಲ್ಲ. ಜೈಲಿನಲ್ಲಿ ವ್ಯವಸ್ಥೆಯಲ್ಲಿ ಲೋಪಗಳು ಕಾಣಲಿಲ್ಲ. ಪುರುಷ ಮತ್ತು ಮಹಿಳಾ ಖೈದಿಗಳ ಬ್ಯಾರಕ್ ಭೇಟಿ ನೀಡಲಾಗಿದೆ. ಅಡುಗೆ ಮನೆಗೆ ಸಹ ಭೇಟಿ ನೀಡಿ ಆಹಾರ ರುಚಿ ಪರಿಶೀಲನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
 
ಆಹಾರದ ಗುಣಮಟ್ಟ ಸಹ ಉತ್ತಮವಾಗಿದೆ. ಕೈದಿಗಳ ಜೊತೆ ಮುಕ್ತವಾಗಿ ಚರ್ಚೆ ಮಾಡಲಾಗಿದೆ. ಈ ವೇಳೆ ಯಾವುದೇ ಗುರುತರ ಆರೋಪ ಮಾಡಿಲ್ಲ. ಆದ್ರೆ ಜೈಲಿನ ಧೋರಣೆ ಬಗ್ಗೆ ಕೆಲ ಕೈದಿಗಳಿಂದ ದೂರು ಕೇಳಿಬಂದಿದೆ. ತಪ್ಪು ಮಾಡಿ ಬಂದಿರುವ ಕೈದಿಗಳಿಗೆ ಅಂತಹ ಧೋರಣೆ ಸಾಮಾನ್ಯ. ಕೊಲೆಗಡುಕ ವಾಲ್ಮೀಕಿ ರಾಮಾಯಣ ಬರೆದಿದ್ದಾನೆ. ಕೃಷ್ಣನ ಜನ್ಮ ಸ್ಥಳ ಸಹ ಜೈಲಾಗಿದೆ. ಮೈಕ್ ಮೂಲಕ ಜೈಲು ಬಂಧಿಗಳ ಹಕ್ಕು ಬಗ್ಗೆ ಅರಿವು ಮೂಡಿಸಲಾಯಿತು. ಸದ್ಯ ಈಗಲೇ ಕ್ಲೀನ್ ಚಿಟ್ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
 
ಮತ್ತೆ ಹಲವು ಬಾರಿ ಇದೇ ರೀತಿ ಜೈಲಿಗೆ ಅನಿರೀಕ್ಷಿತ ಭೇಟಿ ನೀಡ್ತೇವೆ. ಜೈಲಿನ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು. 9 ರಿಂದ 10 ವರ್ಷ ಜೈಲು ವಾಸ ಅನುಭವಿಸಿದರ ಪಟ್ಟಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸಿ ಬಿಡುಗಡೆಗೆ ಕ್ರಮ ಕೈಗೊಳ್ಳುತ್ತೇವೆ. ಜೈಲು ಭೇಟಿ ವಿಷಯ ಮೊದಲೇ ತಿಳಿದಿರುವ ಸಾಧ್ಯತೆ ಇದೆ. ಅಕ್ರಮದ ಬಗ್ಗೆ ಮಾಹಿತಿ ಸಿಕ್ಕರೆ ಕಾನೂನು ಪ್ರಾಧಿಕಾರದಿಂದ ಕ್ರಮ ಕೈಗೊಳ್ಳುತ್ತೇವೆ ಎಂದು ಹೈಕೋರ್ಟ್ ಜಡ್ಜ್ ವೀರಪ್ಪ ಹೇಳಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಗರಂ