Publish Date: Thu, 20 Apr 2023 (09:58 IST)
Updated Date: Thu, 20 Apr 2023 (10:17 IST)
ಬೆಂಗಳೂರು : ಪುಲಕೇಶಿನಗರದಲ್ಲಿ ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭವಾಗಿದ್ದು ಪರಮೇಶ್ವರ್ ಆಪ್ತನಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ.
ಮನೆಗೆ ಬೆಂಕಿ ಬಿದ್ದವರಿಗೂ ಇಲ್ಲ. ಬೆಂಕಿ ಹಾಕಿದ ಆರೋಪ ಹೊತ್ತವರಿಗೂ ಟಿಕೆಟ್ ಸಿಕ್ಕಿಲ್ಲ. ಇಬ್ಬರ ನಡುವಿನ ಜಗಳ ಎರಡು ಬಣದ ನಡುವಿನ ಫೈಟ್ ಮೂರನೇ ಬಣಕ್ಕೆ ನೆರವಾಗಿದೆ.
ಕೆಜಿಹಳ್ಳಿ ಡಿಜೆಹಳ್ಳಿ ಗಲಾಟೆಯ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಬಿದ್ದಿತ್ತು. ಸಂಪತ್ ರಾಜ್ ಮೇಲೆ ಬೆಂಕಿ ಹಾಕಿಸಿದ ಆರೋಪ ಬಂದಿತ್ತು.
ಪರಿಶಿಷ್ಟ ವರ್ಗಕ್ಕೆ ಮೀಸಲಾಗಿರುವ ಈ ಕ್ಷೇತ್ರದಲ್ಲಿ ಅನುಕಂಪದ ಆಧಾರದ ಮೇಲೆ ಶ್ರೀನಿವಾಸ ಮೂರ್ತಿ ಅವರಿಗೆ ಟಿಕೆಟ್ ನೀಡುವಂತೆ ಸಿದ್ದರಾಮಯ್ಯ ಲಾಬಿ ಮಾಡಿದ್ದರೆ ಮಾಜಿ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಪರ ಡಿಕೆ ಶಿವಕುಮಾರ್ ಬ್ಯಾಟ್ ಬೀಸಿದ್ದರು.
ಇಬ್ಬರ ನಡುವಿನ ಹಗ್ಗಜಗ್ಗಾಟ ಈಗ ಪರಮೇಶ್ವರ್ ಆಪ್ತ ಎ.ಸಿ ಶ್ರೀನಿವಾಸ್ಗೆ ಪುಲಿಕೇಶಿನಗರದ ಟಿಕೆಟ್ ಸಿಕ್ಕಿದೆ. ಶ್ರೀನಿವಾಸ್ ಅವರು ದೇವನಹಳ್ಳಿ ಕ್ಷೇತ್ರದಿಂದ ಕಣಕ್ಕೆ ಇಳಿಯಲು ಮುಂದಾಗಿದ್ದರು. ಆದರೆ ಅಲ್ಲಿಯ ಟಿಕೆಟ್ ಕೈ ತಪ್ಪಿದ್ದರೂ ಈಗ ಪುಲಕೇಶಿನಗರದ ಟಿಕೆಟ್ ಸಿಕ್ಕಿದೆ.