Select Your Language

Notifications

webdunia
webdunia
webdunia
webdunia

ಪ್ಯಾಲೇಸ್ ಗ್ರೌಂಡ್ ಮೇಲ್ಚಾವಣಿ ಕುಸಿತ

ಪ್ಯಾಲೇಸ್ ಗ್ರೌಂಡ್ ಮೇಲ್ಚಾವಣಿ ಕುಸಿತ
ಬೆಂಗಳೂರು , ಭಾನುವಾರ, 23 ಜನವರಿ 2022 (18:03 IST)
ಬೆಂಗಳೂರು ನಗರದ ಪ್ಯಾಲೇಸ್​ ಗ್ರೌಂಡ್​​ನ ಪಾರ್ಟಿ ಹಾಲ್​​ನ ಮೇಲ್ಚಾವಣಿ ಕುಸಿತಗೊಂಡ ಘಟನೆ ನಡೆದಿದೆ. ಘಟನೆಯಲ್ಲಿ ಮೂವರು ಕಾರ್ಮಿಕರಿಗೆ ಗಾಯ ಆಗಿದ್ದು, ಓರ್ವನ ಕೈ ಮುರಿತವಾಗಿದೆ. ಗೇಟ್ ನಂಬರ್ 8 ರಲ್ಲಿ ಪಾರ್ಟಿ ಹಾಲ್​​ನ ಮೇಲ್ಚಾವಣಿ ಕುಸಿತವಾಗಿದ್ದು, ಸ್ಥಳದಲ್ಲಿ ಕಾರ್ಯಕ್ರಮ ಹಿನ್ನೆಲೆ ಸೆಟ್ ನಿರ್ಮಾಣ ಮಾಡಲಾಗಿತ್ತು.
ಕೊವಿಡ್ ಹೆಚ್ಚಳ ಹಿನ್ನೆಲೆ ಇಂದಿನ ಕಾರ್ಯಕ್ರಮ ರದ್ದಾಗಿತ್ತು. ಡೆಕೋರೇಷನ್ ಮಾಡಿದ್ದ ಸೆಟ್ ಬಿಚ್ಚುವ ವೇಳೆ ಈ ಅವಘಡ ಸಂಭವಿಸಿದೆ. ಮೇಲ್ಚಾವಣಿ ಕುಸಿತದಿಂದಾಗಿ ತಾತ್ಕಾಲಿಕ ಸೆಟ್ ವಾಲಿದ್ದು, ಸದಾಶಿವನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಬಂದ್ರೆ ಮನೇಲಿ ಇರಿ ಗಾಬರಿ ಬೇಡ