Publish Date: Thu, 28 Jun 2018 (10:26 IST)
Updated Date: Thu, 28 Jun 2018 (10:27 IST)
ಬೆಂಗಳೂರು: ಸಿಎಂ ಕುಮಾರಸ್ವಾಮಿ ಮನೆ ಮುಂದೆ ಇಂದು ಪೈಲ್ವಾನ್ ಗಳ ಗುಂಪೇ ನೆರೆದಿದೆ. ಹಾಗಾದರೆ ಭದ್ರತೆ ವಿಚಾರಕ್ಕೆ ಸಿಎಂ ಏನಾದ್ರೂ ಪೈಲ್ವಾನ್ ಗಳನ್ನು ಕರೆಸಿಕೊಂಡರಾ ಎಂದು ಅಚ್ಚರಿಯಾಗೋದು ಬೇಡ.
ಸಿಎಂ ನಿವಾಸಕ್ಕೆ ಆಗಮಿಸಿದವರೆಲ್ಲರೂ ಮಾಜಿ ಪೈಲ್ವಾನ್ ಗಳು. ಇವರು ತಮ್ಮ ಬೇಡಿಕೆ ಈಡೇರಿಕೆ ಮಾಡಿ ಎಂದು ಕುಮಾರಸ್ವಾಮಿಯವರ ಬಳಿ ಮನವಿ ಮಾಡಲು ಬಂದವರು.
ಧಾರವಾಡದಿಂದ ಬಂದಿರುವ ಪೈಲ್ವಾನ್ ಗಳು ಗೌರವ ಧನ ಹೆಚ್ಚಳ ಸೇರಿದಂತೆ ತಮ್ಮ ಬೇಡಿಕೆ ಮುಂದಿಡಲು ಸಿಎಂ ಕುಮಾರಸ್ವಾಮಿ ಭೇಟಿಗೆ ಆಗಮಿಸಿದ್ದಾರೆ. ಇದೇ ಉದ್ದೇಶಕ್ಕಾಗಿ ಜೆಪಿ ನಗರದ ಸಿಎಂ ಮನೆಗೆ ಬಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.