Webdunia - Bharat's app for daily news and videos

Install App

ಪದ್ಮಶ್ರೀ ಪುರಸ್ಕೃತೆ ಜನಪದ ಕಲಾವಿದೆ ಸುಕ್ರಜ್ಜಿ ಇನ್ನಿಲ್ಲ

Krishnaveni K
ಗುರುವಾರ, 13 ಫೆಬ್ರವರಿ 2025 (09:22 IST)
Photo Credit: X
ಕಾರವಾರ: ಯಾರ ಹಂಗೂ ಇಲ್ಲದೇ ಹಾಡುತ್ತಿದ್ದ ಹಾಡು ಹಕ್ಕಿ ಈಗ ಹಾಡು ನಿಲ್ಲಿಸಿದೆ. ಪದ್ಮಶ್ರೀ ಪುರಸ್ಕೃತೆ ಜನಪದ ಹಾಡುಗಾರ್ತಿ ಸುಕ್ರಜ್ಜಿ ಇಹಲೋಕ ತ್ಯಜಿಸಿದ್ದಾರೆ.

88 ವರ್ಷದ ಸುಕ್ರಜ್ಜಿ ವಯೋಸಹಜ ಖಾಯಿಲೆಗಳಿಂದಾಗಿ ಇಂದು ಮುಂಜಾನೆ 3.30 ಕ್ಕೆ ನಿಧನರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಬಡಿಗೇಡಿ ಗ್ರಾಮದವರು ಸುಕ್ರಜ್ಜಿ. ಬುಡಕಟ್ಟು ಜನಾಂಗದಲ್ಲಿ ಜನಿಸಿದ್ದ ಸುಕ್ರಜ್ಜಿ ತಮ್ಮ ಹಾಡಿನ ಮೂಲಕವೇ ಗಮನ ಸೆಳೆದವರು.

ಅವರಿಗೆ ತಾಯಿಯೇ ಗುರುವಾಗಿದ್ದರು. ಹಾಡು ಹಕ್ಕಿಯಾಗಿದ್ದ ಸುಕ್ರಜ್ಜಿ ಸಾಂಪ್ರದಾಯಿಕ ಬುಡಕಟ್ಟು ಜನಾಂಗದವರ ಜನಪದ ಹಾಡುಗಳನ್ನು ಸಂರಕ್ಷಿಸಿಕೊಂಡು ಬರುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಇದೇ ಕಾರಣಕ್ಕೆ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿತ್ತು.

ಪದ್ಮಶ್ರೀ ಅಲ್ಲದೆ, ನಾಡೋಜ ಪ್ರಶಸ್ತಿ, ಜನಪದ ಶ್ರೀ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರದ್ದಾಗಿತ್ತು.  ಅವರ ಜೀವನಗಾಥೆ ಪಠ್ಯ ಪುಸ್ತಕದ ರೂಪದಲ್ಲಿ ವಿದ್ಯಾರ್ಥಿಗಳಿಗೆ ಪರಿಚಯಿಸಲಾಗುತ್ತಿದೆ. ಇಂತಿಪ್ಪ ಕನ್ನಡದ ಹೆಮ್ಮೆಯ ಕಲಾವಿದೆ ಈಗ ಹಾಡು ನಿಲ್ಲಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Operation Sindoor: ಶಾಲೆ, ಆಸ್ಪತ್ರೆ ಗುರಿಯಾಗಿಸಿ ನಡೆಸಿದ ಪಾಕ್‌ ಮಿಸೈಲ್‌ ದಾಳಿಗೆ ತಕ್ಕ ಉತ್ತರ

ಪಾಕಿಸ್ತಾನದ ಸೇನಾ ಪಡೆಯ ಗುಂಡಿನ ದಾಳಿಗೆ ರಜೌರಿಯ ಹೆಚ್ಚುವರಿ ಜಿಲ್ಲಾಧಿಕಾರಿ ಸಾವು, ಹಲವರಿಗೆ ಗಾಯ

Operation Sindoor: ಪಾಕಿಸ್ತಾನದ ಮಿಲಿಟರಿ ಪೋಸ್ಟ್‌, ಡ್ರೋನ್ ಲಾಂಚ್‌ಪ್ಯಾಡ್‌ ಉಡೀಸ್‌

Operation Sindoor: ಭಾರತ ಏಟಿಗೆ ಪಾಕ್‌ ತತ್ತರ - ಇಸ್ಲಾಮಾಬಾದ್‌ನಲ್ಲಿ ಪೆಟ್ರೋಲ್ ಪಂಪ್‌ಗಳು ಬಂದ್‌

Operation Sindoor, ವಿಶ್ವ ಭೂಪಟದಲ್ಲೇ ಪಾಕಿಗಳು ಇಲ್ಲದಂತೆ ಆಗಬೇಕು: ಕಂಗನಾ ರನೌತ್‌

ಮುಂದಿನ ಸುದ್ದಿ
Show comments