Select Your Language

Notifications

webdunia
webdunia
webdunia
webdunia

ಚಂದಾಪುರದ ಆಸ್ಪತ್ರೆಯ ಆಕ್ಸಿಜನ್ ಘಟಕ ಸ್ಫೋಟ, ಭಾರೀ ಸದ್ದಿಗೆ ಬೆಚ್ಚಿಬಿದ್ದ ರೋಗಿಗಳು

Chandrapur Hospital

Sampriya

ಚಿಂಚೋಳಿ , ಭಾನುವಾರ, 7 ಜುಲೈ 2024 (12:09 IST)
Photo Courtesy X
ಚಿಂಚೋಳಿ: ಇಲ್ಲಿನ ಚಂದಾಪುರದ ತಾಲ್ಲೂಕು ಆಸ್ಪತ್ರೆಯ ಹಿಂದುಗಡೆ ಇರುವ ಆಕ್ಸಿಜನ್ ಘಟಕದಲ್ಲಿ ಭಾನುವಾರ ಸ್ಫೋಟ ಸಂಭವಿಸಿದ್ದು,  ಅಗ್ನಿ ಶಾಮಕ ದಳದ ಅಧಿಕಾರಿ ಹಸನ್ ನೇತೃತ್ವದಲ್ಲಿ ಸೋರಿಕೆ ತಡೆಯುವ ಪ್ರಯತ್ನ ನಡೆಸುತ್ತಿದ್ದಾರೆ.

ಇನ್ನೂ ಸ್ಫೋಟದ ವೇಳೆ ಭಾರೀ ಸದ್ದು ಸಂಭವಿಸಿದ್ದು, ಆಮ್ಲಜನಕದ ವಾಸನೆ ಆಸ್ಪತ್ರೆ ಮತ್ತು ಸುತ್ತಲಿನ ಅರ್ಧ ಕಿ.ಮೀ ವ್ಯಾಪ್ತಿಯಲ್ಲಿ ಹಬ್ಬಿದೆ. ಆಘಾತದಿಂದ ಸಿಬ್ಬಂದಿ ಹಾಗೂ ರೋಗಿಗಳು ಆಸ್ಪತ್ರೆ ಖಾಲಿ ಮಾಡಿ ಆವರಣದಲ್ಲಿ ಕುಳಿತಿದ್ದಾರೆ.

ಆಕ್ಸಿಜನ್ ಘಟಕದಲ್ಲಿ ನಿರಂತರ ಸೋರಿಕೆಯಾಗುತ್ತಿದ್ದು, ಯಾರನ್ನೂ ಸಮೀಪ ಹೋಗಲು ಬಿಡುತ್ತಿಲ್ಲ. ವೈದ್ಯರು ಮತ್ತು ಸಿಬ್ಬಂದಿ ವಸತಿ ಗೃಹಗಳನ್ನು ಖಾಲಿ ಮಾಡಿದ್ದಾರೆ.  ಸಬ್ ಇನ್‌ಸ್ಪೆಕ್ಟರ್ ಹಣಮಂತ ಭಂಕಲಗಿ ಸ್ಥಳಕ್ಕೆ ಧಾವಿಸಿದ್ದು ಸುತ್ತಲಿನ‌ ಬಡಾವಣೆ ಜನರಿಗೂ ಜಾಗೃತಿ ವಹಿಸಲು ಸೂಚಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಈ ಬಾರಿಯ ಬಜೆಟ್‌ ಮೂಲಕ ದಾಖಲೆ ಸೃಷ್ಟಿಸಲಿರುವ ನಿರ್ಮಲಾ ಸೀತಾರಾಮನ್