Select Your Language

Notifications

webdunia
webdunia
webdunia
webdunia

ನಮ್ಮ ನೆಲ, ಜಲ, ಗಡಿ ವಿಚಾರ ಮುಖ್ಯ : ಬಸವರಾಜ ಬೊಮ್ಮಾಯಿ

ನಮ್ಮ ನೆಲ, ಜಲ, ಗಡಿ ವಿಚಾರ ಮುಖ್ಯ : ಬಸವರಾಜ ಬೊಮ್ಮಾಯಿ
ನವದೆಹಲಿ , ಬುಧವಾರ, 14 ಡಿಸೆಂಬರ್ 2022 (15:03 IST)
ಬೆಂಗಳೂರು : ನಮಗೆ ನಮ್ಮ ನೆಲ, ಜಲ, ಗಡಿ ವಿಚಾರ ಮುಖ್ಯ. ಗಡಿ ವಿಚಾರದಲ್ಲಿ ನಮ್ಮ ನಿಲುವನ್ನು ಅಮಿತ್ ಶಾ ಅವರಿಗೆ ಸ್ಪಷ್ಟಪಡಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದಲ್ಲಿ ಮಾತನಾಡಿದ ಅವರು, ದೆಹಲಿಗೆ ಹೋಗುತ್ತಿದ್ದೇನೆ. ಗಡಿ ವಿಚಾರದ ಬಗ್ಗೆ ಅಮಿತ್ ಶಾ ಅವರು ಸಭೆ ಕರೆದಿದ್ದಾರೆ. ಗಡಿ ವಿಚಾರದ ಸಭೆ ಬಳಿಕ ಸಚಿವ ಸಂಪುಟ ವಿಸ್ತರಣೆ ಬಗ್ಗೆಯೂ ಚರ್ಚೆ ಮಾಡ್ತೇನೆ.

ನಾನು ಎಲ್ಲ ಸಿದ್ಧತೆಗಳ ಜೊತೆ ಹೋಗುತ್ತಿದ್ದೇನೆ. ಅವಕಾಶ ಸಿಕ್ಕಿದರೆ ಸಂಪುಟ ಬಗ್ಗೆ ಅಮಿತ್ ಶಾ ಅವರ ಜೊತೆ ಚರ್ಚೆ ಮಾಡ್ತೇನೆ ಎಂದು ಸ್ಪಷ್ಟಪಡಿಸಿದರು. 

ಗಡಿ ವಿವಾದ ಕುರಿತು ಪ್ರತಿಕ್ರಿಯಿಸಿ, ಮಹಾರಾಷ್ಟ್ರ ಆರು ದಶಕಗಳಿಂದ ಗಡಿ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ನಾವು ಹಾಗಲ್ಲ, ನಮಗೆ ನಮ್ಮ ನೆಲ-ಜಲ-ಗಡಿ ವಿಚಾರ ಮುಖ್ಯ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡಿನ ಸಚಿವರಾಗಿ ಉದಯನಿಧಿ ಪ್ರಮಾಣ ವಚನ ಸ್ವೀಕಾರ