ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಉಚಿತ ವಿದ್ಯುತ್ ಅಂತ ಹೇಳಿ.ಉದ್ಯಮಶೀಲ ಹಾಗೂ ಬಾಕಿ ವ್ಯವಹಾರದಿಂದ ವಿದ್ಯುತ್ ಬಿಲ್‌ನಲ್ಲಿ ವಂಚನೆ ಮಾಡ್ತಿದೆ.ಈಗಾಗಲೇ ಕೈಗಾರಿಕಾ ಉದ್ಯಮಿಗಳು ಬಂದ್‌ಗೆ ಕರೆ ನೀಡಿದ್ದಾರೆ.ಜನರು ವಿದ್ಯುತ್ ಬಿಲ್ ಬಗ್ಗೆ ಚರ್ಚೆ ಮಾಡ್ತಿದ್ದಾರೆ.ಸಾಮಾನ್ಯ ಜನರಿಗೆ 2-3 ಸಾವಿರ ಬಿಲ್ ಬರ್ತಿದೆ.ಕೈಗಾರಿಕೆಗಳಿಗೆ 2-3 ಲಕ್ಷ ಬಿಲ್ ಬರ್ತಿದೆ.ಕೈಗಾರಿಕೋದ್ಯಮಿಗಳು ಹೋರಾಟಕ್ಕೆ ಬಿಜೆಪಿ ನೈತಿಕ ಬೆಂಬಲ ನೀಡ್ತಿದೆ.ಕೈಗಾರಿಕೆಗಳಿಗೆ ಇರಲು ಅವಕಾಶ ನೀಡಿ ಅಂತ ಮನವಿ ಮಾಡ್ತೀವಿ.ಇಡೀ ರಾಜ್ಯದಲ್ಲಿ ಬೇರೆ ಬೇರೆ ಹೊಡೆತ ನೀಡುವ ಕೆಲಸ ಮಾಡ್ತಿದೆ.ಹಾಲಿನ ಬೆಂಬಲ ಬೆಲೆ ವಾಪಸ್ ಪಡೀತಿದ್ದಾರೆ.ವಿದ್ಯುತ್ ದರ ಹೆಚ್ಚಳ ಮಾಡಿದ್ದಾರೆ.ಬಿಜೆಪಿ ಅಧಿಕಾರದಲ್ಲಿ ಇದ್ದಾಗ 75 ಯೂನಿಟ್ SC, ST ಗಳಿಗೆ ನೀಡಿದ್ದೆವು, ಬೇರೆ ಯಾವುದೇ ದರ ಹೆಚ್ಚಳ ಮಾಡಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ಅಕ್ಕಿ ವಿಚಾರವಾಗಿ ಹತ್ತು ಕೆ.ಜಿ ಅಕ್ಕಿ ಕೊಡ್ತೀವಿ ಅಂದ್ರು.ಸಿದ್ದರಾಮಣ್ಣ ಸುಳ್ಳು ಹೇಳ್ತಿದ್ದಾರೆ.ಕೇಂದ್ರ ಸರ್ಕಾರ 5 k.g ಅಕ್ಕಿ ಕೊಡ್ತಿದ್ದಾರೆ.ಅದನ್ನ ನಾವು ಕೊಡ್ತಿದ್ದೇವೆ ಅಂತಿದ್ದಾರೆ.ಅವರೇ ಎಲ್ಲಾ ಕೊಡೋದಾಗಿದ್ರೆ ಸಿದ್ದರಾಮಣ್ಣನ ಫೋಟೋ ಹಾಕೋತಿದ್ರು.ಅಲ್ಲದೇ ಕಾಂಗ್ರೆಸ್ ವಿರುದ್ಧ ಬಿಜೆಪಿ ಹೋರಾಟ ವಿಚಾರವಾಗಿ ಪತ್ರಿಕಾ ಹೇಳಿಕೆ ಕೊಡ್ತಿದ್ದೇವೆ.ಕಾಂಗ್ರೆಸ್ ಒಳ್ಳೆಯ ಆಡಳಿತಕ್ಕೆ ನಮ್ಮ ಬೆಂಬಲ ಇದೆ.ಜನರಿಗೆ ಸಮಸ್ಯೆ ಆದ್ರೆ ನಾವು ಹೋರಾಟ ಮಾಡ್ತಿದ್ದೇವೆ.ಇದೇ 22ರಿಂದ ನಮ್ಮ ಹೋರಾಟ ಶುರು ಆಗಲಿದೆ.ಕೇಂದ್ರದ ಸಾಧನಾ ಸಮಾವೇಶ ನಡೆಯಲಿದೆ.ವಿವಿಧ ಕಾರ್ಯಕ್ರಮ ರೂಪಿಸಲಾಗ್ತಿದೆ.22ರಿಂದ ರಾಜ್ಯಾದ್ಯಂತ ಪ್ರವಾಸ ನಡೆಯಲಿದೆ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.