Select Your Language

Notifications

webdunia
webdunia
webdunia
webdunia

ಅವೈಜ್ಞಾನಿಕ ಮಾರ್ಗಸೂಚಿಗೆ ಬೇಸತ್ತ ಸಂಘಟನೆಗಳು

ಅವೈಜ್ಞಾನಿಕ ಮಾರ್ಗಸೂಚಿಗೆ ಬೇಸತ್ತ ಸಂಘಟನೆಗಳು
bangalore , ಗುರುವಾರ, 9 ಸೆಪ್ಟಂಬರ್ 2021 (18:57 IST)
ಗಣೇಶ ಹಬ್ಬದ ಅವೈಜ್ಞಾನಿಕ ಮಾರ್ಗಸೂಚಿಗೆ ಸಂಘಟನೆಗಳು ಬೇಸರಗೊಂಡಿದೆ. ಹೀಗಾಗಿ ಇಂದು ಬಿಬಿಎಂಪಿ ಮುಖ್ಯ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿದರು. ಹಿಂದೂ ಸಂಘಟನೆಗಳ ಮುತ್ತಿಗೆ  ಗೆ ತಡೆಯಲು ಬಿಬಿಎಂಪಿ ಕೇಂದ್ರ ಕಚೇರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.ಬೆಂಗಳೂರು ಕೇಂದ್ರ ವಿಭಾಗ ಪೊಲೀಸರಿಂದ ಭದ್ರತಾ ವ್ಯವಸ್ಥೆ ಮಾಡಿದ್ದು, ಬಿಬಿಎಂಪಿ ಕೇಂದ್ರ ಕಚೇರಿಯ ಸುತ್ತ 300 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿತ್ತು.ಇಂದು ಮುತ್ತಿಗೆ ಹಾಕಲು ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ನಿರ್ಧಾರ ಮಾಡಿದ್ದು, ಮಾರ್ಗಸೂಚಿಗಳ ಪರಿಷ್ಕರಣೆ ಮಾಡುವಂತೆ ಒತ್ತಾಯಿಸಿ ಮುತ್ತಿಗೆಗೆ ಯತ್ನಿಸಿದರು. ಹೀಗಾಗಿ ಮುತ್ತಿಗೆ ಪ್ರಯತ್ನ ತಡೆಯಲು ಪೊಲೀಸರ ನಿಯೋಜನೆ ಮಾಡಲಾಗಿತ್ತು.
 
ಗಣೇಶ ಉತ್ಸವ ಸಮಿತಿಯ ಬೇಡಿಕೆ ಏನು..?
 
1. ಎಲ್ಲಾ ಗಣೇಶ ಉತ್ಸವ ಸಮಿತಿಗಳಿಗೆ ಹಬ್ಬ ಆಚರಣೆಗೆ ಅವಕಾಶ ಕೊಡಬೇಕು
 
2. ಗಣೇಶ ಮೂರ್ತಿ ಎತ್ತರದ ಬಗ್ಗೆ ಸರ್ಕಾರದ ನಿರ್ಧಾರ ಹಿಂಪಡೆಯಬೇಕು
 
3. ಚೌತಿ ಇಂದ ಚತುರ್ದಶಿವರೆಗೂ ಹಬ್ಬ ಆಚರಣೆಗೆ ಅವಕಾಶ ಕೊಡಬೇಕು
 
4. ಅನುಮತಿಗಾಗಿ ತಕ್ಷಣ ಏಕಗವಾಕ್ಷಿ ವ್ಯವಸ್ಥೆ ರೂಪಿಸಬೇಕು ಎಂದು ಒತ್ತಾಯ
 
5. ಉತ್ಸವ ಸಮಿತಿಯ ನಿರ್ಧಿಷ್ಟ ಮಂದಿಗೆ ಮೆರವಣಿಗೆಗೆ ಅವಕಾಶ ಕೊಡಬೇಕು
 
5 ಬೇಡಿಕೆಗಳನ್ನ ಇಟ್ಟುಕೊಂಡು ಮುತ್ತಿಗೆ ಹಾಕಲು ನಿರ್ಧಾರ

Share this Story:

Follow Webdunia kannada

ಮುಂದಿನ ಸುದ್ದಿ

1001 ಗಣೇಶ ಉಚಿತವಾಗಿ ವಿತರಣೆ