Select Your Language

Notifications

webdunia
webdunia
webdunia
webdunia

ನಾಳೆಯಿಂದ ನಡೆಯಲಿರುವ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳಿಂದ ರಣತಂತ್ರ

ನಾಳೆಯಿಂದ ನಡೆಯಲಿರುವ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳಿಂದ ರಣತಂತ್ರ
ಬೆಂಗಳೂರು , ಬುಧವಾರ, 9 ಅಕ್ಟೋಬರ್ 2019 (11:40 IST)
ಬೆಂಗಳೂರು : ನಾಳೆಯಿಂದ ನಡೆಯಲಿರುವ ಮೂರು ದಿನಗಳ ಅಧಿವೇಶನದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ರಣತಂತ್ರ ರೂಪಿಸಿವೆ ಎನ್ನಲಾಗಿದೆ.




ನಾಳೆಯಿಂದ ಮೂರು ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಅಂದು  ಬಜೆಟ್ ಕುರಿತು  ಚರ್ಚೆ ಮಾಡಲು ಸರ್ಕಾರ ನಿರ್ಧರಿಸಿದೆ. ಆದರೆ ಪ್ರವಾಹ ಪರಿಹಾರ ವಿಳಂಬ, ವರ್ಗಾವಣೆ, ಡಿ.ಕೆ.ಶಿವಕುಮಾರ್ ಪ್ರಕರಣದ ಬಗ್ಗೆ ಚರ್ಚಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷದವರು ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.


ಹಾಗೇ 3 ದಿನಗಳಿಗೆ ಮಾತ್ರ ನಿಗದಿಯಾಗಿರುವ ಅಧಿವೇಶನವನ್ನು ಗುರುವಾರ ನಡೆಯಲಿರುವ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಿ ಅವಧಿ ವಿಸ್ತರಣೆ ಮಾಡುವ ಬಗ್ಗೆ ನಿರ್ಧರಿಸಲಾಗುವುದು ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಜಂಬೂಸವಾರಿ ವೇಳೆ ವಾಲಿದ ಅಂಬಾರಿ; ತಪ್ಪಿದ ಅವಘಡ