ಉಡುಪಿ: ನಕ್ಸಲ್ ಮುಖಂಡ ವಿಕ್ರಂಗೌಡ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿ ಇಂದಿಗೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆ ಮುನ್ನೇಚರಿಕಾ ಕ್ರಮವಾಗಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಯಿತು. ಎಎನ್‍ಎಫ್ ಪೊಲೀಸರು ಉಡುಪಿ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಕೂಂಬಿಂಗ್ ನಡೆಸಲಾಯಿತು.
ರಾಜ್ಯದಲ್ಲಿ ಭಾರೀ ದೊಡ್ಡ ಸುದ್ದಿಯಾದ ಹೆಬ್ರಿ ಸಮೀಪದ ಪೀತಬೈಲಿನಲ್ಲಿ ವಿಕ್ರಂ ಗೌಡನನ್ನು ಎನ್‍ಕೌಂಟರ್ ನಡೆದ ಬೆನ್ನಲ್ಲೇ ಅನೇಕ ನಕ್ಸಲರು ಶರಣಾಗಿದ್ದರು.
ಈ ಮೂಲಕ ಕರ್ನಾಟಕ ನಕ್ಸಲ್ ಮುಕ್ತ ಎಂದು ಘೋಷಿಸಲಾಗಿತ್ತು. ಆದರೂ ಸಹ ತಮ್ಮ ನಾಯಕರು ಹತ್ಯೆಯಾದ ದಿನ ತಮ್ಮ ಇರುವಿಕೆ ತೋರಿಸುವ ಸಾಧ್ಯತೆಯಿರುವ ಹಿನ್ನೆಲೆ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದಾರೆ.
ಸದ್ಯ ಸಕ್ರಿಯ ನಕ್ಸಲರು ಇಲ್ಲದೇ ಹೋದರು ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಕಟ್ಟೆಚ್ಚರವಹಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಇಂದು ಕೂಂಬಿಂಗ್ ನಡೆಸಲಾಯಿತು.