Select Your Language

Notifications

webdunia
webdunia
webdunia
webdunia

ರಾತ್ರಿ ಜಾಲಿ ರೈಡ್ ಗೆ ಒರ್ವ ಬಲಿ-ಮತ್ತೊರ್ವನಿಗೆ ಗಂಭೀರ ಗಾಯ

ರಾತ್ರಿ ಜಾಲಿ ರೈಡ್ ಗೆ ಒರ್ವ ಬಲಿ-ಮತ್ತೊರ್ವನಿಗೆ ಗಂಭೀರ ಗಾಯ
bangalore , ಭಾನುವಾರ, 9 ಜುಲೈ 2023 (16:20 IST)
ರಾತ್ರಿ ಜಾಲಿ ರೈಡ್ ಗೆ ಒರ್ವ ಬಲಿ ಮತ್ತೊರ್ವನಿಗೆ ಗಂಭೀರವಾದ ಗಾಯವಾಗಿರುವ ಘಟನೆವಬೆಂಗಳೂರಿನ ಪದ್ಮನಾಭ ನಗರದ ದೇವೆಗೌಡ ಪೆಟ್ರೋಲ್ ಬಂಕ್ ಬಳಿ ನಡೆದಿದೆ.ರಾಮ್ ಕುಮಾರ್( 29)ಮೃತ  ,ಯಶವಂತ (22)  ಗಾಯಾಳಾಗಿದ್ದು,ಇಬ್ಬರು ಬ್ಯಾಟರಾಯನಪುರ ಬಳಿಯ ಪ್ರಮೋದ್ ಲೇಔಟ್ ನಿವಾಸದಲ್ಲಿ ವಾಸವಿದ್ರು.ಖಾಸಗಿ ಕಂಪನಿಯಲ್ಲಿ  ರಾಮ್ ಕುಮಾರ್ ಟೆಕ್ಕಿಯಾಗಿದ್ದ .ರಾತ್ರಿ ಎರಡು ಘಂಟೆ ಸುಮಾರಾಗಿ ಘಟನೆ ನಡೆದಿದ್ದು,ಫ್ಲೈ ಒವರ್  ತಡೆಗೋಡೆಗೆ ಡಿಕ್ಕಿ ಹೊಡೆದಿದ್ದಾನೆ.
 
ಹಿಂಬದಿ ಕುಳಿತಿದ್ದ ರಾಮ್ ಕುಮಾರ್ ತಡೆಗೋಡೆಗೆ ಡಿಕ್ಕಿಯಾಗಿ ಹಿಂಬದಿಯಿಂದ ಹಾರಿ ಕೆಳಗೆ ಬಿದ್ದಿದ್ದಾನೆ.ತಲೆಗೆ ಪೆಟ್ಟಾಗಿ ಸ್ಥಳದಲ್ಲಿ ರಾಮ್ ಕುಮಾರ್ ಸಾವನಾಪ್ಪಿದ್ದಾನೆ.ಗಾಯಾಳನ್ನ ಯಶವಂತಪುರ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ರಾಮ್ ಕುಮಾರ್ ಮೃತ ದೇಹ ಕಿಮ್ಸ್ ಅಸ್ಪತ್ರೆಗೆ ರವಾನಿಸಿದ್ದು,ಡ್ರಿಂಗ್ ಅಂಡ್ ಡ್ರೈವ್ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ.ಘಟನೆ ಸಂಭಂದ ಬನಶಂಕರಿ ಸಂಚಾರ ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದ್ವಿಚಕ್ರ ವಾಹನ ಡಿಕ್ಕಿ; ಮೂವರಿಗೆ ಗಾಯ