Select Your Language

Notifications

webdunia
webdunia
webdunia
webdunia

ರೈತರೊಂದಿಗೆ ನಾಟಿ ಮಾಡಿದ ರಾಹುಲ್​​ ಗಾಂಧಿ

ರೈತರೊಂದಿಗೆ ನಾಟಿ ಮಾಡಿದ ರಾಹುಲ್​​ ಗಾಂಧಿ
bangalore , ಭಾನುವಾರ, 9 ಜುಲೈ 2023 (15:30 IST)
ಕಾಂಗ್ರೆಸ್​​ ನಾಯಕ ರಾಹುಲ್​​ ಗಾಂಧಿ ಅವರು ಇಂದು ಬೆಳಗ್ಗೆ ದೆಹಲಿಯಿಂದ ಶಿಮ್ಲಾಕ್ಕೆ ತೆರಳುತ್ತಿದ್ದಾಗ ಸೋನೆಪತ್‌ನ ಮದೀನಾ ಗ್ರಾಮದ ರೈತರನ್ನು ಭೇಟಿ ಮಾಡಿ, ಅವರ ಜತೆಗೆ ಭತ್ತ ನಾಟಿ ಮಾಡಿದ್ದಾರೆ. ತುಂತುರು ಮಳೆಯ ನಡುವೆಯೂ ರಾಹುಲ್ ಗಾಂಧಿ ಹೊಲಕ್ಕೆ ಇಳಿದು ಟ್ರ್ಯಾಕ್ಟರ್ ಓಡಿಸಿ ರೈತರೊಂದಿಗೆ ಸಂವಾದ ನಡೆಸಿದ್ದಾರೆ. ಸೋನೆಪತ್‌ನ ಬರೋಡಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮದೀನಾ ಗ್ರಾಮದಲ್ಲಿ ರೈತರು ನಾಟಿ ಮಾಡುತ್ತಿದ್ದ ವೇಳೆ, ರೈತ ಸಂಜಯ್ ಕುಮಾರ್ ಅವರ ಹೊಲದ ಬಳಿ ಏಕಾಏಕಿ ಸುಮಾರು ಕಾರುಗಳ ಜತೆಗೆ ಪೊಲೀಸರ ವಾಹನವು ಬರುವುದನ್ನು ಕಂಡು ಒಂದು ಬಾರಿ ಸಂಜಯ್ ಕುಮಾರ್ ಗಾಬರಿಯಾಗಿದ್ದಾರೆ. ಕಾರಿನ ಬಳಿ ಹೋದಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಹನದಿಂದ ಹೊರಬರುವುದನ್ನು ನೋಡಿ ಆಶ್ಚರ್ಯವಾಗಿದೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಗಾಗಿ ಋಷ್ಯಶೃಂಗೇಶ್ವರಿಗೆ ವಿಶೇಷ ಪೂಜೆ