Select Your Language

Notifications

webdunia
webdunia
webdunia
webdunia

ಜಾತಿಗೆ ಒಬ್ಬರು ಡಿಸಿಎಂ ಚರ್ಚೆ ಅನವಶ್ಯಕ: ಬಸವರಾಜ ರಾಯರೆಡ್ಡಿ

ಜಾತಿಗೆ ಒಬ್ಬರು ಡಿಸಿಎಂ ಚರ್ಚೆ ಅನವಶ್ಯಕ: ಬಸವರಾಜ ರಾಯರೆಡ್ಡಿ

Sampriya

ಕಲಬುರಗಿ , ಸೋಮವಾರ, 1 ಜುಲೈ 2024 (19:44 IST)
Photo Courtesy X
ಕಲಬುರಗಿ:  ಸಿಎಂ ಬದಲಾವಣೆ ಬಗ್ಗೆ ಚಂದ್ರಶೇಖರ ಸ್ವಾಮೀಜಿ ಹೇಳಿಕೆ ನೀಡಿದ್ದು ಸರಿಯಲ್ಲ. ಸಿಎಂ ಸ್ಥಾನ ಬಿಟ್ಟುಕೊಡಿ ಎನ್ನಲು ಅವರೇನು ಶಾಸಕಾಂಗ ಪಕ್ಷದ ಸದಸ್ಯರಾ ಪಕ್ಷದ ವರಿಷ್ಠರಾ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರೆಡ್ಡಿ ಅವರು ಆಕ್ರೋಶ ಹೊರಹಾಕಿದರು.

ಇಂದು ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಡಿಸಿಎಂ ಕೇವಲ ಗೌರವದ ಹುದ್ದೆ ಹೊರತು ಸಂವಿಧಾನದ ಹುದ್ದೆಯಲ್ಲ. ಸಿಎಂ ಸಿದ್ದರಾಮಯ್ಯ ಅವರು ಒಬ್ಬ ಅತ್ಯುತ್ತಮ ಆಡಳಿತಗಾರ ಆಗಿದ್ದು, ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬಾರದು ಎಂದರು.

ಇನ್ನೂ ಭುಗಿಲೆದ್ದಿರುವ ಜಾತಿಗೆ ಒಬ್ಬರು ಡಿಸಿಎಂ ಚರ್ಚೆ ಅನವಶ್ಯಕವಾದದ್ದು. ಕಾಂಗ್ರೆಸ್ ಮುಖಂಡರು  ಇದನ್ನು ಇಲ್ಲಿಗೆ ನಿಲ್ಲಿಸಿ ಜನರ ಸಮಸ್ಯೆಗಳ ಬಗ್ಗೆ ಮಾತನಾಡಬೇಕು ಎಂದರು.

ಇನ್ನೂ ಚಂದ್ರಶೇಖರ ಸ್ವಾಮೀಜಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಧಾರ್ಮಿಕ ಮುಖಂಡರಾದವರು ಜನರಿಗೆ ಧರ್ಮದ ಬಗ್ಗೆ ಬೋಧನೆ ಮಾಡಬೇಕು ಹೊರತು ಧಾರ್ಮಿಕ ಅಶಸ್ತು ತೋರಿಸಬಾರದು ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ಹಿಂದೂ ಸಮಾಜದಲ್ಲಿ ಕ್ಷಮೆ ಕೇಳಬೇಕು: ಆರ್. ಅಶೋಕ್ ಆಕ್ರೋಶ