Select Your Language

Notifications

webdunia
webdunia
webdunia
webdunia

ಕೆಎಂಎಫ್‌ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದ ಹಾಲಿನ ಉತ್ಪಾದನೆ

Karnataka Milk Federation

Sampriya

ಬೆಂಗಳೂರು , ಶನಿವಾರ, 29 ಜೂನ್ 2024 (19:00 IST)
Photo Courtesy X
ಬೆಂಗಳೂರು: ಕೆಎಂಎಫ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಹಾಲಿನ ಸಂಗ್ರಹಣೆ ಒಂದು ಕೋಟಿ ಲೀಟರ್ ದಾಟಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು,  ರಾಜ್ಯದಲ್ಲಿ ಕಳೆದ ವರ್ಷ ಪ್ರತಿದಿನ ಸರಾಸರಿ 72 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲು ಇದೀಗ ಒಂದು ಕೋಟಿ ಲೀಟರ್ ದಾಟಿದೆ.  ಈ ಶ್ರೇಯ ನಾಡಿನ ಪ್ರತಿಯೊಬ್ಬ ಶ್ರಮಜೀವಿ ಹೈನುಗಾರನಿಗೂ ಸಲ್ಲಬೇಕು' ಎಂದು ಅಭಿನಂದಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಹೀಗಿದೆ.  ನಮ್ಮ‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೈನುಗಾರರಿಂದ ಖರೀದಿಸುವ ಹಾಲಿಗೆ ರೂ.3 ಹೆಚ್ಚಳ ನೀಡುತ್ತಿರುವುದು, ಉತ್ತಮ ಮುಂಗಾರಿನಿಂದಾಗಿ ಜಾನುವಾರುಗಳಿಗೆ ಹಸಿರು ಮೇವು ಲಭ್ಯವಾಗುತ್ತಿರುವುದು ಈ ಎಲ್ಲಾ ಕಾರಣದಿಂದಾಗಿ ಕಳೆದ ವರ್ಷ ನಿತ್ಯ ಸರಾಸರಿ 72 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲು ಇಂದು ಒಂದು ಕೋಟಿ ಲೀಟರ್ ಗೆ ತಲುಪಿದೆ.

ಯಾವ ಕೆಎಂಎಫ್ ಸಂಸ್ಥೆಯನ್ನು ಹಿಂದಿನ ಬಿಜೆಪಿ‌ ಸರ್ಕಾರ ನಷ್ಟದ ಹಾದಿಗೆ ತಳ್ಳಿ ಗುಜರಾತ್‌ನ ಅಮೂಲ್ ಜೊತೆ ವಿನೀಲ ಮಾಡುವ ಕುತಂತ್ರ ನಡೆಸಿತ್ತೋ, ಕನ್ನಡಿಗ ರೈತರು ದಶಕಗಳ ಕಾಲ ಶ್ರಮದಿಂದ ಕಟ್ಟಿದ ಸಂಸ್ಥೆಯನ್ನು ಯಾರದೋ ಮರ್ಜಿಗೆ ಒಳಗಾಗಿ ವಿಲೀನದ ಹೆಸರಲ್ಲಿ ಮುಳುಗಿಸಲು ಹೊರಟಿತ್ತೋ, ಅದೇ ಕೆಎಂಎಫ್ ಇಂದು ಒಂದು ಕೋಟಿ ಲೀಟರ್ ಹಾಲನ್ನು ಸಂಗ್ರಹಿಸಿ, ಇತಿಹಾಸದಲ್ಲೇ ಹೊಸದೊಂದು ದಾಖಲೆ ಬರೆದಿದೆ.

ಈ ಶ್ರೇಯ ನಾಡಿನ ಪ್ರತಿಯೊಬ್ಬ ಶ್ರಮಜೀವಿ ಹೈನುಗಾರನಿಗೂ ಸಲ್ಲಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಇಶಾ ಅಂಬಾನಿ ಮಗು ಪಡೆದಿದ್ದು ಹೇಗೆ ಬಯಲಾಯಿತು ಸೀಕ್ರೆಟ್