ಮೈಸೂರು ವಿಶ್ವವಿದ್ಯಾನಿಲಯದ ಸದ್ಯದ ಪರಿಸ್ಥಿತಿ ತಂದೆಯಿಲ್ಲದ ಮನೆಯಾಗಿದೆ. ವಿಶ್ವವಿದ್ಯಾನಿಲಯಕ್ಕೆ ಕುಲಪತಿಗಳು ನೇಮಕವಾಗದೆ ಆಡಳತ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ. ವಿವಿಯಲ್ಲಿ ಕುಲಪತಿಗಳಿಲ್ಲದೆ ನಿವೃತ್ತ ಹಾಗು ಗುತ್ತಿಗೆ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಲಪತಿಗಳ ಸಹಿ ಇಲ್ಲದೆ ಯಾವುದೇ ಸೌಲಭ್ಯವನ್ನು ಪಡೆಯಲು ಆಗುತ್ತಿಲ್ಲ.. ನೌಕರರು ಕುಲಪತಿಗಳ ಸಹಿ ಇಲ್ಲದೆ ವೇತನವನ್ನು ಪಡೆಯಲು ಆಗುತ್ತಿಲ್ಲ.ಇನ್ನೊಂದೆಡೆ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಸಂಬಂಧಿಸಿದಂತೆ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆ ಮನಗಂಡಿರುವ ರಾಜ್ಯಪಾಲರು, ನೌಕರರಿಗೆ ಸಂಬಳ ವಿಳಂಬವಾಗದಂತೆ ಕ್ರಮವಹಿಸಲು ಹಣಕಾಸು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.. ಇತ್ತೀಚೆಗೆ ಲೋಕನಾಥ್ ಅವರನ್ನು ಮೈಸೂರು ವಿವಿ ಕುಲಪತಿಗಳಾಗಿ ರಾಜ್ಯ ಸರ್ಕಾರ ನೇಮಿಸಿತ್ತು.. ಲೋಕನಾಥ್ ನೇಮಕಕ್ಕೆ ಹೈಕೋರ್ಟ್ ತಡೆ ನೀಡಿದೆ. ಹಾಗಾಗಿ ಇಷ್ಟೆಲ್ಲ ಸಮಸ್ಯೆ ಉದ್ಭವಿಸಿದೆ.