Select Your Language

Notifications

webdunia
webdunia
webdunia
webdunia

ನೂರಾರು ವರ್ಷದ ಆಲದ ಮರ ಬಿದ್ದದ್ದು ಯಾರ ಮೇಲೆ?

ನೂರಾರು ವರ್ಷದ ಆಲದ ಮರ ಬಿದ್ದದ್ದು ಯಾರ ಮೇಲೆ?
ದಾವಣಗೆರೆ , ಭಾನುವಾರ, 8 ಸೆಪ್ಟಂಬರ್ 2019 (20:24 IST)
ಮಳೆಯ ಆರ್ಭಟಕ್ಕೆ ನೂರಾರು ವರ್ಷದ ಹಳೆಯದಾದ ಬೃಹತ್ ಆಲದ ಮರವೊಂದು ಉರುಳಿ ಬಿದ್ದಿದೆ.

ಜೋರಾಗಿ ಸುರಿದ ಮಳೆಯಿಂದಾಗಿ ಹಳೆಯ ಆಲದ ಮರವೊಂದು ಪುರಾತನ ಗುಡಿಯ ಮೇಲೆ ಬಿದ್ದಿದೆ. ಇದರಿಂದಾಗಿ  ದೇಗುಲದ ಮೇಲ್ಛಾವಣಿಗೆ ಧಕ್ಕೆಯಾದ ಘಟನೆ ದಾವಣಗೆರೆ ತಾಲೂಕಿನ ಅಣಜಿ ಗ್ರಾಮ ಹೊರ ವಲಯದ ಕೆರೆ ಏರಿಯ ಮೇಲೆ ಸಂಭವಿಸಿದೆ.

ದಾವಣಗೆರೆ ತಾಲೂಕಿನ ಅಣಜಿ ಗ್ರಾಮಕ್ಕೆ ಹೊಂದಿಕೊಂಡಿರುವ 2-3 ಶತಮಾನಗಳಷ್ಟು ಹಳೆಯದಾದ ಕೆರೆ ಹೊನ್ನಮ್ಮ ದೇವಿ ದೇವಸ್ಥಾನದ ಮೇಲೆ ದೈತ್ಯ ಆಲದ ಮರ ಉರುಳಿ ಬಿದ್ದಿದೆ. ಅಣಜಿ ಕೆರೆಯ ಕೆರೆ ಮೊನ್ನಮ್ಮ ದೇವಿ ಪ್ರಸಿದ್ಧವಾಗಿದ್ದು, ಇಲ್ಲಿ ನಡೆಯುವ ಜಾತ್ರೆಗೆ ಸಾವಿರಾರು ಮಂದಿ ಸೇರುತ್ತಾರೆ. 

ಒಂದು ಭಾಗದಲ್ಲಿ ಕೆರೆ ಇದ್ದರೆ, ಮತ್ತೊಂದು ಭಾಗದಲ್ಲಿ ಈ ಗುಡಿ ಇದೆ. ಸುಮಾರು 130 ವರ್ಷಗಳ ಇತಿಹಾಸ ಇರುವ ಬೆಳೆದು ನಿಂತಿದ್ದ ಆಲದ ಮರ, ದೇಗುಲಕ್ಕೆ ಮತ್ತಷ್ಟು ಕಳೆ ತಂದಿತ್ತು.  ದೈತ್ಯ ಆಲದ ಮರ ಸತತ ಮಳೆಯಿಂದಾಗಿ ಹಾಗೂ ಹಳೆಯ ಮರವಾಗಿದ್ದರಿಂದ ಒಳಗೊಳಗೆ ನೀರು ಹರಿಯಲು ಜೋರಾಗಿತ್ತು. ಅಲ್ಲದೇ ಈ ಮರದ ಮಧ್ಯೆ ಪೊಟರುಗಳಲ್ಲಿ ನೀರು ನಿಂತು ಬೇರುಗಳ ಹಾಳಾಗಿದ್ದವು. ಹೀಗಾಗಿ ಗಾಳಿ ಬೀಸಿದಾಗ ಮರ ವಾಲುತ್ತಲೇ ಇತ್ತು.

ಇತ್ತೀಚೆಗೆ ಸಂಚರಿಸುವಾಗ ಚಾಲಕನ ನಿಯಂತ್ರಣ ತಪ್ಪಿ ವಾಹನವೊಂದು ಕೆರೆ ಏರಿಯ ಗುಡಿಯ ಭಾಗಕ್ಕೆ ಗುದ್ದಿದ್ದು, ದೇವಿಯ ಪವಾಡ ಎಂಬಂತೆ ಪ್ರಯಾಣಿಕರು ಬದುಕಿ ಉಳಿದಿದ್ದರು. ಅಂದಿನ ಘಟನೆಯಲ್ಲಿ ಮರ ಇಲ್ಲದೇ ಇದ್ದಿದ್ದರೆ ಹಲವರು ಪ್ರಾಣ ತೆರಬೇಕಿತ್ತು ಎನ್ನುತ್ತಾರೆ ಇಲ್ಲಿನ ಸ್ಥಳಿಯರು. ಇನ್ನೂ ಈ ಇತಿಹಾಸವುಳ್ಳ ಆಲದ ಮರ ಸುರಿದ ಗಾಳಿ ಮಳೆಗೆ ಬಿದ್ದಿದ್ದು, ಪರಿಣಾಮ ದೇವಸ್ಥಾನ ಜಖಂಗೊಂಡಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯುತ್ ಕಂಬಕ್ಕೆ ಕಾರ್ ಡಿಕ್ಕಿ: ಮುಂದೇನಾಯ್ತು? ಶಾಕಿಂಗ್