ಬೆಂಗಳೂರಿನಿಂದ ಒಮಿಕ್ರಾನ್ ಸೋಂಕಿತನೊಬ್ಬ ವಿದೇಶಕ್ಕೆ ಪರಾರಿಯಾಗಿದ್ದು, ಹೊಟೇಲ್ ಮಾಲೀಕರಿಗೆ ಬಿಬಿಎಂಪಿ ನೋಟೀಸ್ ನೀಡಿದೆ.
ಬೆಂಗಳೂರಿನ ಶಾಂಗ್ರಿಲಾ ಹೊಟೇಲ್‌ನಲ್ಲಿ ಈತ ವಾಸ್ತವ್ಯ ಹೂಡಿದ್ದ. ಜೀನೋಮಿಕ್ ಸೀಕ್ವೆನ್ಸ್ ವರದಿ ಬರುವ ಮುನ್ನವೇ ನಕಲಿ ವರದಿ ತೋರಿಸಿ ಸೋಂಕಿತ ಎಸ್ಕೇಪ್ ಆಗಿದ್ದಾನೆ. ಜೀನೋಮಿಕ್ ವರದಿಯಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದೆ.
ಈತ ನ.27ರ ಮಧ್ಯರಾತ್ರಿ ಬೆಂಗಳೂರು ತೊರೆದಿದ್ದಾನೆ. ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಸೋಂಕಿತ ಕ್ವಾರೆಂಟೀನ್ ಆಗಿರಲಿಲ್ಲ ಎನ್ನಲಾಗಿದೆ. ಒಮಿಕ್ರಾನ್ ಸೋಂಕಿತ ಹೊಟೇಲ್‌ನಿಂದ ಎಸ್ಕೇಪ್ ಆಗಿದ್ದು ಹೇಗೆ? ಅವರನ್ನು ಹೊರಗೆ ಬಿಟ್ಟಿದ್ದು ಯಾಕೆ? ಜೀನೋಮಿಕ್ಸ್ ವರದಿ ಬರುವವರೆಗೂ ಕಾದಿಲ್ಲ ಏಕೆ ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರಿಸುವಂತೆ ಬಿಬಿಎಂಪಿ ಹೋಟೆಲ್ ಮಾಲೀಕರಿಗೆ ನೋಟಿಸ್ ನೀಡಿದೆ.
ಅಲ್ಲದೇ ಈ ಕುರಿತು ಸಮಗ್ರ ತನಿಖೆಗೆ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಮುಂದಾಗಿದೆ.