Publish Date: Sun, 28 Oct 2018 (15:55 IST)
Updated Date: Sun, 28 Oct 2018 (15:57 IST)
ಹಳೆಯ ನೋಟುಗಳನ್ನು ಬದಲಾವಣೆ ಮಾಡಿಕೊಡುತ್ತಿದ್ದ ಜಾಲವೊಂದನ್ನು ಪತ್ತೆ ಮಾಡಿ 600 ಕೋಟಿಗೂ ಅಧಿಕ ಅವ್ಯವಹಾರ ಬಯಲಿಗೆ ಎಳೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಾಗಲಕೋಟೆಯ ಜಿಲ್ಲಾ ಅಪರಾಧ ತನಿಖಾ ದಳ ಹಾಗೂ ನವನಗರ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಹವಾಲಾ ದಂಧೆ ನಡೆಸುತ್ತಿದ್ದ 12 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರು ಮಹಾರಾಷ್ಟ್ರ, ಕರ್ನಾಟಕ, ರಾಜಸ್ತಾನ, ಉತ್ತರಪ್ರದೇಶ, ಗೋವಾ ಮೂಲದವರಾಗಿದ್ದಾರೆ.
ಹಳೆಯ ನೋಟುಗಳ ಬದಲಾವಣೆಗಾಗಿ 100 ರೂ.ಗಳಿಗೆ 70 ರೂ.ಕಮೀಷನ್ ಪಡೆದು 30 ರೂ.ಗಳ ಹೊಸ ನೋಟುಗಳನ್ನು ಕೊಡುವ ವ್ಯವಹಾರ ನಡೆಸುತ್ತಿದ್ದರು.
ಐದು ರಾಜ್ಯಗಳಲ್ಲಿ 647 ಕೋಟಿ ರೂ. ಅವ್ಯವಹಾರ ಪತ್ತೆ ಮಾಡಲಾಗಿದೆ.