2012 ರಲ್ಲಿ ಓಕಳಿಪುರಂ ಅಷ್ಟಪತ ಕಾಮಗಾರಿಗೆ ವರ್ಕ್ ಆರ್ಡರ್ ಆಗಿತ್ತು. 2014ರಲ್ಲಿ ಆರಂಭವಾಗಿ 2016ಕ್ಕೆ ಮುಗಿಯಬೇಕಿತ್ತು. ಆದ್ರೆ ಇಂದಿಗೂ ಆ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಹೀಗಿರೋವಾಗ, ಒಂದು ವೇಳೆ ಓಕಳಿಪುರಂ ಪ್ರಾಜೆಕ್ಟ್ ಮುಗಿದ ನಂತರ, ಮೆಜೆಸ್ಟಿಕ್‌ನಿಂದ ಬರೋ ವಾಹನಗಳು ಮಾಗಡಿ ರಸ್ತೆ, ಬಸವೇಶ್ವರನಗರ, ಮೈಸೂರು ಸರ್ಕಲ್‌ಗೆ ಹೋಗೋವಾಗ ಮಧ್ಯದಲ್ಲೇ ಟ್ರಾಫಿಕ್ ಜ್ಯಾಂ ಆಗುತ್ತೆ. ಅದಕ್ಕಾಗಿ ಹೊಸ ಫ್ಲೈಓವರ್ ನಿರ್ಮಾಣ ಮಾಡಬೇಕು ಅಂತ ಬಿಬಿಎಂಪಿ ಆಲೋಚಿಸಿ ಆರಂಭಿಸಿದ ಪರ್ಯಾಯ ಫ್ಲೈಓವರ್ ಈಗಾಗಲೇ ಲೋಕಾಪರ್ಣೆಗೆ ಸಿದ್ದವಾಗಿದೆ. ಫೆಬ್ರವರಿ 28 ರಂದು ಉದ್ಘಾಟನೆಯನ್ನು ಮಾಡಲಾಗುತ್ತೆ ಅಂತ ಈಗಾಗಲೇ ಸಿಎಂ ಕೂಡ ತಿಳಿಸಿದ್ದಾರೆ. ಆದ್ರೆ, ಇದರ ಹಿಂದೆ ಮತ್ತೊಂದು ಆಯಾಮ ಕೂಡ ಇದೆ. ರಾಜ್ಯದ ಪ್ರಮುಖ ರಾಜಕಾರಣಿಯೊಬ್ಬರಿಗೆ ಸೇರಿರೋ ಲುಲು ಮಾಲ್‌ಗೆ ಅನುಕೂಲ ಮಾಡಿಕೊಡೋ ನಿಟ್ಟಿನಲ್ಲೇ ಅಧಿಕಾರಿಗಳು ಈ ಕಾಮಗಾರಿಯನ್ನ ಅತ್ಯಂತ ಶೀಘ್ರವಾಗಿ ಮುಗಿಸಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದೆ. ಜನಸಾಮಾನ್ಯರಿಗೆ ಉಪಯೋಗವಾಗೋ ಪ್ರಾಜೆಕ್ಟ್‌ಗಳಿಗೆ ಎಲ್ಲ ರೀತಿಯ ವಿಘ್ನಗಳೂ ಎದುರಾಗುತ್ತೆ. ಆದ್ರೆ ಅದ್ಯಾಕೋ ರಾಜಕಾರಣಿಗಳ ಯಾವ ಪ್ರಾಜೆಕ್ಟ್‌ಗೂ ಒಂದು ತೊಡಕು ಉಂಟಾಗಲ್ಲ ಅನ್ನೋ ಪ್ರಶ್ನೆಗೆ ಯಾವ ಅಧಿಕಾರಿ ಬಳಿಯೂ ಉತ್ತರವಿಲ್ಲ.
ಮಾಲ್ ಗೆ ಅನುಕುಲವಾಗ್ಲಿ ಅಂತ ಲೂಲೂ ಮಾಲ್ ಪ್ಲೈಓವರ್ ಬೇಗನೇ ಕಾಮಗಾರಿ ಮುಗಿಸಿ ಲೋಕರ್ಪಣೆಗೆ ಸಿದ್ದತೆ ಮಾಡಿದರೆ,, ಅದೇನೇ ಇರಲಿ, ನಗರದಲ್ಲಿರೋ ಎಲ್ಲ ಫ್ಲೈಓವರ್‌ಗಳನ್ನೂ ಇಷ್ಟೇ ವೇಗದಲ್ಲಿ ಬಿಬಿಎಂಪಿ ಅದ್ಯಾಕೆ ಕಟ್ಟಲಾಗ್ತಿಲ್ಲ ಅನ್ನೋ ಪ್ರಶ್ನೆ ಓಕಳಿಪುರಂನಿಂದ ಹಿಡಿದು ಈಜೀಪುರದವರೆಗೂ ಕಾಡ್ತಿದೆ.