ನಿರಂತರ ತೈಲ ಬೆಲೆ ಏರಿಕೆಯಿಂದ ನಮ್ಮ ಬದುಕು ದುಬಾರಿಯಾಗುತ್ತಿದೆ ಎಂದು ನಾವೆಲ್ಲ ಅಲವತ್ತುಕೊಳ್ಳುತ್ತಿರುವಾಗ, ಜಾಗತಿಕ ತೈಲ ಕಂಪನಿಗಳು ಭರ್ಜರಿ ಲಾಭ ಮಾಡುತ್ತಿವೆ._
2021ರ ಇತ್ತೀಚಿನ ತ್ರೈಮಾಸಿಕದಲ್ಲಿ ಸೌದಿ ಅರೇಬಿಯಾದ ತೈಲ ಸಂಸ್ಥೆ ಸೌದಿ ಅರಾಮ್ಕೊ ಹಿಂದಿನ ವರ್ಷದ ಇದೇ ಸಮಯದ ಆದಾಯಕ್ಕೆ ಹೋಲಿಸಿದರೆ ಶೇ.158ರಷ್ಟು ಹೆಚ್ಚಿಸಿಕೊಂಡಿದೆ.
ಕೊರೋನಾದ ತೀವ್ರ ಸೋಂಕಿನ ದಿನಗಳ ನಂತರದ ದಿನಗಳಲ್ಲಿ ಆಗಿರುವ ಜಾಗತಿಕ ಆರ್ಥಿಕ ಚೇತರಿಕೆಯನ್ನು ಉಪಯೋಗಿಸಿಕೊಂಡು ಕಂಪನಿಗಳು ಹೆಚ್ಚಿನ ಬೆಲೆಗೆ ಕಚ್ಚಾತೈಲ ಮಾರುತ್ತಿವೆ.
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಯಾಗಿರುವ ಸೌದಿ ಅರಾಮ್ಕೊ ವಿಶ್ವದ ಅತ್ಯಂತ ಲಾಭದಾಯಕ ಸಂಸ್ಥೆಯಾಗಿದೆ. ಈ ವೇಳೆ ಸೌದಿಯ ಇತರ ತೈಲ ಕಂಪನಿಗಳು ಸಹ ಲಾಭ ಪಡೆದುಕೊಳ್ಳುತ್ತಿವೆ.
ಅಮೆರಿಕದ ಎರಡು ಬೃಹತ್ ತೈಲ ಕಂಪನಿಗಳಾದ ಎಕ್ಸಾನ್ಮೊಬಿಲ್ ಮತ್ತು ಚೆವ್ರಾನ್ ಕೂಡ ಇತ್ತೀಚಿನ ಕೆಲ ವರ್ಷಗಳಲ್ಲೇ ಅತಿದೊಡ್ಡ ಲಾಭವನ್ನು ಇತ್ತೀಚಿನ ತ್ರೈಮಾಸಿಕ ವರದಿಯಲ್ಲಿ ತೋರಿಸಿವೆ.