Select Your Language

Notifications

webdunia
webdunia
webdunia
webdunia

ನಕಲಿ ಕೀಟನಾಶಕ ಜಾಲ ಬೇಧಿಸಿದ ಅಧಿಕಾರಿಗಳು

ನಕಲಿ ಕೀಟನಾಶಕ ಜಾಲ ಬೇಧಿಸಿದ ಅಧಿಕಾರಿಗಳು
ಗಂಗಾವತಿ , ಗುರುವಾರ, 9 ಫೆಬ್ರವರಿ 2023 (16:21 IST)
ನಕಲಿ ವಿಳಾಸ ನೀಡಿ ಕಳಪೆ ಗುಣಮಟ್ಟದ ಕೀಟನಾಶಕವನ್ನು ತಯಾರಿಸಿ ಮಾರಾಟ ಮಾಡಿ ರೈತರಿಗೆ ವಂಚಿಸುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಗಂಗಾವತಿ ತಾಲೂಕಿನ ಕೃಷಿ ಇಲಾಖೆ ಜಾರಿದಳ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಗಂಜ್ ಪ್ರದೇಶದಲ್ಲಿರುವ ಕೀಟನಾಶಕ ಮಾರಾಟ ಅಂಗಡಿ ಮೇಲೆ ದಾಳಿ ಮಾಡಿ, ವಂಚನೆ ಪ್ರಕರಣವನ್ನು ಬಯಲಿಗೆಳೆದಿದೆ. ತಕ್ಷಣಕ್ಕೆ ನಕಲಿ ಕೀಟನಾಶಕ ದಾಸ್ತಾನು ಕಂಡು ಬಂದಿರಲಿಲ್ಲ. ಆದರೆ ಮಾರಾಟದ ದಾಖಲೆಗಳನ್ನು ಪರಿಶೀಲಿಸಿದಾಗ ಅಧಿಕಾರಿಗಳಿಗೆ ಅನುಮಾನ ಬಂದಿತ್ತು. ಅಂಗಡಿ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಕನಕಗಿರಿ ತಾಲೂಕಿನ ನವಲಿ ಹೋಬಳಿಯ ಆದಾಪುರದ ಕೀಟನಾಶಕ ತಯಾರಿಕಾ ಘಟಕದಿಂದ ಖರೀದಿಸಿದ್ದಾಗಿ ಮಾಲೀಕರು ಮಾಹಿತಿ ನೀಡಿದ್ದಾರೆ. ಪರಿಶೀಲಿಸಿದಾಗ ಅಂಗಡಿ ಮಾಲೀಕರು ನೀಡಿರುವುದು ನಕಲಿ ವಿಳಾಸ ಗೊತ್ತಾಗಿದೆ. ಬೇರೆ ಸ್ಥಳದಲ್ಲಿ ನಕಲಿ ಕೀಟನಾಶ ತಯಾರಿಸಿ ತಂದು ಮಾರಾಟ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂಗವಿಕಲನ ಮೇಲೆ ಮಂಗಳಮುಖಿಯರ ಹಲ್ಲೆ