Select Your Language

Notifications

webdunia
webdunia
webdunia
Friday, 11 April 2025
webdunia

JDS ಜೊತೆ ಕೈ ಜೋಡಿಸಲ್ಲ ಎಂದ ಸಿಎಂ

JDS ಜೊತೆ ಕೈ ಜೋಡಿಸಲ್ಲ ಎಂದ ಸಿಎಂ
bangalore , ಗುರುವಾರ, 9 ಫೆಬ್ರವರಿ 2023 (16:04 IST)
ಬಿಜೆಪಿ ಚುನಾವಣೆ ಆಟದಲ್ಲಿ ಗೆಲ್ಲಲ್ಲೆಂದೆ ಆಟವಾಡುತ್ತಿದೆ. ಈ ವೇಳೆ ಜೆಡಿಎಸ್ ಪಕ್ಷಕ್ಕೆ ತನ್ನ ಆಟ ಆಡಲು ಅವಕಾಶ ನೀಡಬಾರದು ಎಂಬ ಉದ್ದೇಶವಿರುವ ಕಾರಣ ಬಿಜೆಪಿ ಜೆಡಿಎಸ್ ಪಕ್ಷದ ಜೊತೆಗೆ ಯಾವುದೇ ಕಾರಣಕ್ಕೂ ಕೈ ಜೋಡಿಸಲ್ಲ  ಎಂದು ಮೈತ್ರಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು. ಬೆಂಗಳೂರಿನ ನಡೆದ ಖಾಸಗಿ ಸಮಾರಂಭದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ‌ ಬರಲಿದೆ. ನಾವು ಈ ವರ್ಷ 130 ಸ್ಥಾನ ಗೆಲ್ಲುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. 2004ರಿಂದ ಅಭಿವೃದ್ಧಿಯತ್ತ ಸಾಗಿದ ಹಾಗೂ ಸಾಮಾಜಿಕ ಕಳಕಳಿಯ ಪಕ್ಷ ನಮ್ಮ ಬಿಜೆಪಿ. ಆದರೆ ನಾವು ಸ್ಪಷ್ಟ ಬಹುಮತ ಹೊಂದಿಲ್ಲ. ಆದರೆ ಈ ಬಾರಿ ಅಗತ್ಯದಷ್ಟು ಸ್ಥಾನ ಲಭಿಸಲಿವೆ. ಈ ಚುನಾವಣೆ ಎಂಬ ಆಟದಲ್ಲಿ ಸೋಲದೇ ಇರಲು ಆಟವಾಡುವುದು, ಗೆಲ್ಲಲೇಬೇಕೆಂದು ಆಡುವುದು ಇದೆ. ಬಿಜೆಪಿ ಮಾತ್ರ ವಿಜಯ ಸಾಧಿಸಲೆಂದೇ ಆಟವಾಡುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪುನರಚ್ಚರಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

HDK ಸ್ಪಷ್ಟೀಕರಣಕ್ಕೆ ಅರ್ಚಕರ ಪಟ್ಟು