Select Your Language

Notifications

webdunia
webdunia
webdunia
webdunia

ನಕಲಿ ದಾಖಲಾತಿ ಸೃಷ್ಟಿಸಿ ವಿದೇಶಿ ಪ್ರಜೆ ಆಕ್ರಮ ವಾಸ

ನಕಲಿ ದಾಖಲಾತಿ ಸೃಷ್ಟಿಸಿ ವಿದೇಶಿ ಪ್ರಜೆ ಆಕ್ರಮ ವಾಸ
bangalore , ಶನಿವಾರ, 30 ಜುಲೈ 2022 (10:44 IST)
ನಕಲಿ ದಾಖಲಾತಿ ಸೃಷ್ಟಿಸಿ ವಿದೇಶಿ ಪ್ರಜೆಗಳ ವೀಸಾ ಮತ್ತು ಪಾಸ್‌ಪೋರ್ಟ್ ನವೀಕರಿಸಲು ಭಾರತದಲ್ಲಿ ಸುಮಾರು 17 ವರ್ಷಗಳಿಂದ ಅಕ್ರಮವಾಗಿ ವಾಸ್ತವಿಕವಾಗಿ ಹೂಡಿದ್ದ ಉಗಾಂಡ ದೇಶದ ಪ್ರಜೆಯನ್ನು ಗಡೀಪಾರು ಮಾಡಲಾಗಿದೆ.
 ಬೋಸ್ಕೋ ಕಾವೇಸಿ ಗಡಿಪಾರಾದ ಉಗಾಂಡ ಮೂಲದ ಅರೋಪಿಯಾಗಿದ್ದಾನೆ‌. ಈತನ ವೀಸಾ ಅವಧಿ 2005ರಲ್ಲಿ ಮುಗಿದರೂ ಅಕ್ರಮವಾಗಿ ವಾಸವಾಗಿದ್ದ. ಭಾರತೀಯ ಯುವತಿಯನ್ನು ಮದುವೆಯಾಗಿದ್ದ. ದೇಶದಲ್ಲಿ ನೆಲೆಸಲು ಅವಕಾಶ ಕೋರಿ ಹೈಕೋರ್ಟ್ ಮೊರೆ ಹೋಗಿದ್ದ. ಈತನ ಅರ್ಜಿಯನ್ನ 2022ರಲ್ಲಿ ಅರ್ಜಿ ತಿರಸ್ಕರಿಸಿತ್ತು. ಈ ಸಂಬಂಧ ವಿದೇಶಿ ನೋಂದಣಿ‌ ಕೇಂದ್ರ(ಎಫ್ಐಆರ್ ಓ) ಕೇಂದ್ರ ಗೃಹ ಸಚಿವಾಲಯಕ್ಕೆ‌ ನೀಡಿದ ಮಾಹಿತಿ ಮೇರೆಗೆ ದೆಹಲಿ ಇಮಿಗ್ರೇಷನ್‌ ಅಧಿಕಾರಿಗಳು ಜುಲೈ19ರಂದು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು. ಬಾಣಸವಾಡಿ ಪೊಲೀಸರ ಸಹಾಯದಿಂದ  ಕೋರ್ಟ್ ನಿಂದ ಸರ್ಚ್ ವಾರೆಂಟ್ ಪಡೆದು ಪರಿಶೀಲಿಸಿದಾಗ 26 ವಿದೇಶಿಯರ ಪಾಸ್ ಪೋರ್ಟ್  ಗಳನ್ನ ಜಪ್ತಿ ಮಾಡಿಕೊಂಡಿರುವುದಾಗಿ ನಗರ ಪೊಲೀಸ್ ಆಯುಕ್ತ ಪ್ರತಾಪ್‌ ರೆಡ್ಡಿ ತಿಳಿಸಿದ್ದಾರೆ.
 
1995ರಲ್ಲಿ ಸ್ಟೂಡೆಂಟ್ ವೀಸಾದಡಿ ಭಾರತಕ್ಕೆ ಬೋಸ್ಕೋ ಕಾವೇಸಿ ಬಂದಿದ್ದ. ಈತನ ವೀಸಾ ಅವಧಿ 2005ರಲ್ಲಿ ಮುಗಿದಿತ್ತು 2006 ರಲ್ಲಿ ಅನಧಿಕೃತ ವಾಸ ಆರು ತಿಂಗಳ ಸಜೆಯಾಗಿತ್ತು. ದೇಶ ಬಿಟ್ಟು ಹೋಗುವಂತೆ ನೋಟಿಸ್ ಜಾರಿ ಮಾಡಿದರೂ ಅಕ್ರಮವಾಗಿ ಇಲ್ಲೇ ಉಳಿದುಕೊಂಡಿದ್ದ. ನೋಟಿಸ್ ಪ್ರಶ್ನಿಸಿ ಮೆಟ್ಟಿಲೇರಿದ್ದ. ಭಾರತೀಯ ಯುವತಿಯನ್ನು ಮದುವೆಯಾಗಿದ್ದು ದೇಶದಲ್ಲಿ ನೆಲೆಸಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್ 2022 ರಲ್ಲಿ ಈತನ ಅರ್ಜಿ ತಿರಸ್ಕೃತಗೊಳಿಸಿತ್ತು ಎಂದು ನ್ಯಾಯಾಲಯ ಆದೇಶ ಹೊರಡಿಸಿದೆ.
ವೈಯಕ್ತಿಕ ಲಾಭಕ್ಕಾಗಿ ವಿದೇಶಿಯರಿಗೆ ಅನುಕೂಲ ಮಾಡಿಕೊಡುವುದಾಗಿ ನಟಿಸುವುದು ಅನಗತ್ಯವಾಗಿ ಅವರಿಂದ ಹಣ ಪಡೆಯುತ್ತಿತ್ತು. ಅಕ್ರಮವಾಗಿ ನೆಲೆಸಿರುವ ವಿದೇಶಿಯರಿಗೆ ನಕಲಿ ದಾಖಲಾತಿ ನೀಡುತ್ತಿದ್ದ. ಮಾನವ ಕಳ್ಳಸಾಗಣೆ, ಬಲವಂತವಾಗಿ ಹಣ ಪಡೆಯುವುದು, ವಂಚನೆ ಸೇರಿದಂತೆ ಕಾನೂನುಬಾಹಿರವಾಗಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿಕ್ಷಣ ಇಲಾಖೆಯ ಆದೇಶದಿಂದ ಆತಂಕಕ್ಕೆ ಹೀಡಾದ ಪೋಷಕರು