Select Your Language

Notifications

webdunia
webdunia
webdunia
webdunia

ನರ್ಸಿಂಗ್ ವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ಸಂಚು ರೂಪಿಸಿದ ಪ್ರಿಯಕರನಿಂದ ಕೊಲೆ!

ನರ್ಸಿಂಗ್ ವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ಸಂಚು ರೂಪಿಸಿದ ಪ್ರಿಯಕರನಿಂದ ಕೊಲೆ!
bengaluru , ಗುರುವಾರ, 26 ಆಗಸ್ಟ್ 2021 (18:20 IST)
ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ನ ನರ್ಸಿಂಗ್ ವಿದ್ಯಾರ್ಥಿನಿ ಕವಿತಾ ಮಿಸ್ಸಿಂಗ್ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪ್ರಿಯಕರನೇ ಸಂಚು ರೂಪಿಸಿ ಕೊಲೆ ಮಾಡಿರುವುದು ದೃಢಪಟ್ಟಿದೆ.

ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಕವಿತಾ (21) ರಿಪ್ಪನ್ ಪೇಟೆ ಸಮೀಪದ ಬಾಳೆಕೊಡ್ಲು ಕಾಡಿನ‌ ಪರಿಸರದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಇದು ವ್ಯವಸ್ಥಿತ ಕೊಲೆ ಎಂಬುದನ್ನು ಧೃಡಪಡಿಸಿದೆ. ಅಸಲಿಗೆ ಪ್ರೇಮಿಯೇ ಕೊಲೆ ಮಾಡಿ ಪ್ರತಿಕಾರ ತೀರಿಸಿಕೊಂಡಿದ್ದಾನೆ.
ಘಟನೆ ಹಿನ್ನಲೆ
ಭಟ್ಕಳ ಸಾಗರ ಗಡಿಭಾಗದ ಬಾನುಕುಳಿ ಗ್ರಾಮದ ಸಮೀಪದ ಕವಿತ ಹಾಗು ರಿಪ್ಪನ್ ಪೇಟೆ ಸನಿಹದ ತಳಲೆ ಗ್ರಾಮದ ಶಿವಮೂರ್ತಿ ಕಳೆದ ಏಳು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.  ಬಿಎಸ್ಸಿ ನರ್ಸಿಂಗ್ ಓದಲು ಕವಿತಾ ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ಗೆ ಸೇರ್ಪಡೆಯಾಗಿದ್ದಳು.ಇತ್ತಿಚ್ಚೆಗೆ  ಶಿವು ಜೊತೆ ಕವಿತ ಅಂತರ ಕಾಪಾಡಿಕೊಂಡಿದ್ದಳು. ಕವಿತಾ ನಡೆ ಶಿವುಗೆ ಹಲವು ಅನುಮಾನ ಹುಟ್ಟಿ ಹಾಕಿತ್ತು. ಕವಿತ  ಭದ್ರಾವತಿ ನಗರದ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು. ನನ್ನನ್ನು ಏಳು ವರ್ಷ ಲವ್ ಮಾಡಿ ಬೇರೊಬ್ಬ ಯುವಕನನ್ನು  ಕವಿತ ಪ್ರೀತಿಸುತ್ತಿದ್ದಕ್ಕೆ ಶಿವು ಕುಪಿತನಾದ.
ಮೊನ್ನೆ ನಂಜಪ್ಪ ಲೈಫ್ ಕೇರ್ ಹಾಸ್ಟೆಲ್ ನಿಂದ ಪುಸಲಾಯಿಸಿ ಕವಿತಾಳನ್ನು ಕರೆದುಕೊಂಡು ರಿಪ್ಪನ್ ಪೇಟೆಯ ಬಾಳೆಕೊಡ್ಡು ಕಾಡಿನ ಪರಿಸರಕ್ಕೆ ಕರೆದೊಯ್ದು ಕೊಲೆ ಮಾಡಿದ್ದಾನೆ.ಇತ್ತ. ಹಾಸ್ಟೆಲ್ ನಿಂದ ಹೋದ ಕವಿತಾ ರಾತ್ರಿಯದರೂ ವಾಪಸ್ಸಾಗದಿರುವುದಕ್ಕೆ ಮ್ಯಾನೆಜ್ ಮೆಂಟ್ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತು.ವಿಪರ್ಯಾಸವೆಂದರೆ ಇಂದು ಕೊಳೆಯುವ ಸ್ಥಿತಿಯಲ್ಲಿ ಕವಿತಾ ಶವ ಪತ್ತೆಯಾಗಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಇತ್ತ ಶಿವು, ತಾನು ಡೆತ್ ನೋಟ್ ಬರೆದಿಟ್ಟು, ವಿಷ ಸೇವಿಸಿದ್ದಾನೆ. ಆರೋಪಿ ಶಿವು ಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಪಾಗಲ್ ಪ್ರೇಮಿ ಬದುಕುಳಿದಿದ್ದಾನೆ. ಡೆತ್ ನೋಟ್ ನಲ್ಲಿ ಕವಿತಾ ಬೇರೊಬ್ವ ಯುವಕನನ್ನು ಪ್ರೀತಿಸುತ್ತಿದ್ದಳು ಎಂಬುದನ್ನು ಶಿವು ಬರೆದಿದ್ದಾನೆ. ಪ್ರೀತಿ ಕೊಂದ ಕೊಲೆಗಾರನ ಕೈಗೆ ಕೋಳ ತೊಡಿಸಲು ಪೊಲೀಸರು ಮುಂದಾಗಿದ್ದಾರೆ. ರಿಪ್ಪನ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ 1213 ಮಂದಿಗೆ ಕೊರೊನಾ ಸೋಂಕು; 1206 ಮಂದಿ ಡಿಸ್ಚಾರ್ಜ್