Daily Horoscope
✕

ನುಡಿ 6.0 ಬಿಡುಗಡೆಗೊಳಿಸಿದ ಸಿಎಂ

Webdunia
ಶುಕ್ರವಾರ, 4 ಜನವರಿ 2019 (18:47 IST)
ಗಣಕಯಂತ್ರದಲ್ಲಿ ಕನ್ನಡ ಭಾಷೆ ಬಳಕೆಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗುವಂತೆ ನುಡಿ ತಂತ್ರಾಂಶವನ್ನು ಅಪ್‌ಡೇಟ್ ಮಾಡಲಾಗಿದ್ದು, `ನುಡಿ 6.0′ ಆವೃತ್ತಿಯನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬಿಡುಗಡೆಗೊಳಿಸಿದ್ದಾರೆ.

ಕನ್ನಡ ಗಣಕ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ರೂಪಿಸಿರುವ ನೂತನ ತಂತ್ರಾಂಶವನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಲೋಕಾರ್ಪಣೆ ಮಾಡಿದರು.

ಸದ್ಯ ಚಾಲ್ತಿಯಲ್ಲಿರುವ ನುಡಿ 5.0 ತಂತ್ರಾಂಶದಲ್ಲಿ ಯೂನಿಕೋಡ್ ಜತೆಗೆ ಆಸ್ಕಿ ಪದ್ಧತಿಯಲ್ಲೂ ಅಕ್ಷರಗಳಿವೆ. ಹಾಗಾಗಿ ಹೊಸ ತಂತ್ರಾಂಶವನ್ನು ಸಂಪೂರ್ಣವಾಗಿ ಯೂನಿಕೋಡ್ ಮಾದರಿಯಲ್ಲಿ ರೂಪಿಸಲಾಗಿದೆ. ಪ್ರಮುಖವಾಗಿ ಸರ್ಕಾರಿ ವ್ಯವಸ್ಥೆಯಲ್ಲಿ ಯೂನಿಕೋಡ್ ಬಳಕೆಯನ್ನೇ ಸಂಪೂರ್ಣವಾಗಿಸುವ ಸಂಕಲ್ಪಕ್ಕನುಗುಣವಾಗಿ ಈ ತಂತ್ರಾಂಶ ಮಾಡಲಾಗಿದೆ ಎಂದರು.

ನುಡಿ ಆಸ್ಕಿ ವ್ಯವಸ್ಥೆಯಲ್ಲಿ 20 ಅಕ್ಷರ ವಿನ್ಯಾಸಗಳನ್ನು (ಫಾಂಟ್) ಯೂನಿಕೋಡ್‌ನಲ್ಲಿ ರೂಪಿಸಲಾಗಿದೆ. ಇನ್ನಷ್ಟು ಫಾಂಟ್‌ಗಳನ್ನು ಬದಲಾಯಿಸುವ ಯೋಜನೆಯಿದೆ.

ಸದ್ಯ ನುಡಿ ತಂತ್ರಾಂಶದಲ್ಲಿ ಕೀಲಿಮಣೆ ಮಾಡಿದ ಫೈಲ್‌ಗಳನ್ನು ಮೈಕ್ರೋಸಾಫ್ಟ್ ವರ್ಡ್‌ನಂಥ ತಂತ್ರಾಂಶದಲ್ಲಿ ತೆರೆಯಲು ಸಾಧ್ಯವಾಗದಿದ್ದ ಲೋಪ ಸರಿಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಧಿಕಾರ ನಿಮ್ಮಪ್ಪನ ಮನೆ ಆಸ್ತಿಯಲ್ಲ: ಸಿಎಂ ವಿರುದ್ಧ ಬಿ.ವೈ. ವಿಜಯೇಂದ್ರ ವಾಗ್ದಾಳಿ

ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸಿದರೆ ನಾವು ಕೈಕಟ್ಟಿ ಕುಳಿತಿರುವುದಿಲ್ಲ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಸ್ವಲ್ಪ ಕರ್ನಾಟಕದ ಕಡೆಗೆ ಗಮನ ಕೊಡಿ: ಪ್ರಧಾನಿ ಮೋದಿಗೆ ಪತ್ರ ಬರೆದ ಮಲ್ಲಿಕಾರ್ಜುನ ಖರ್ಗೆ

ಏರ್ ದುಬೈ ವಿಮಾನ ಪತನ ಯತ್ನದ ತನಿಖೆಯಲ್ಲಿ ಬೆಚ್ಚಿಬೀಳಿಸುವ ಸತ್ಯಾಂಶ

ಮುಂದಿನ ಸುದ್ದಿ
Show comments