Select Your Language

Notifications

webdunia
webdunia
webdunia
webdunia

ಜಲಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ

water board
bangalore , ಗುರುವಾರ, 29 ಜುಲೈ 2021 (20:36 IST)
ಬೆಂಗಳೂರು: ಬೆಂಗಳೂರು ಜಲಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಸಂಬಂಧ ಯಾವುದೇ ನೇಮಕಾತಿ ಆದೇಶ ಹೊರಡಿಸಿಲ್ಲ ಎಂದು ಜಲಮಂಡಳಿ ಸ್ಪಷ್ಟಪಡಿಸಿದೆ.
ಜಲಮಂಡಳಿಯು ತನ್ನ ವೃಂದ, ನೇಮಕಾತಿ ಮತ್ತು ಬಡ್ತಿ ನಿಬಂಧನೆಗಳಿಗೆ ಸಮಗ್ರ ತಿದ್ದುಪಡಿ ಮಾಡಿ ಕರಡು ನಿಬಂಧನೆಗಳನ್ನು ಜು. 20 ರಂದು ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ. ಆಕ್ಷೇಪಣಿಗಳನ್ನು ಆಹ್ವಾನಿಸಿದ್ದು, ಸದರಿ ಅಧಿಸೂಚನೆಯು ನೇಮಕಾತಿ ಅಧಿಸೂಚನೆಯಾಗಿರುವುದಿಲ್ಲ ಹಾಗೂ ಮಂಡಳಿಯಲ್ಲಿ ಯಾವುದೇ ನೇಮಕಾತಿ ಅರ್ಜಿಯನ್ನು ವಿತರಿಸುತ್ತಿರುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನೇಮಕಾತಿಗೆ ಸಂಬಂಧಿಸಿದ ಯಾವುದೇ ಪ್ರಕಟಣೆಯನ್ನು ಮಂಡಳಿಯ ಅಧಿಕೃತ ಜಾಲತಾಣ WWW. bwssb.gov.in ಹಾಗೂ ದೈನಂದಿನ ಪತ್ರಿಕೆಗಳಲ್ಲಿ ಪ್ರಕಟಿಸುತ್ತದೆಯೇ ಹೊರತು ಇತರೆ ಯಾವುದೇ ಸಾಮಾಜಿಕ ಜಾಲತಾಣದಲ್ಲ ಪ್ರಕಟಿಸುವುದಿಲ್ಲ. ನೇಮಕಾತಿ ಸಂಬಂಧ ಸಾರ್ವಜನಿಕರು ಅಭ್ಯರ್ಥಿಗಳು ಯಾವುದೇ ವಂಚನೆಗೆ ಒಳಗಾಗದಂತೆ ಎಚ್ಚರದಿಂದಿರಲು ಈ ಮೂಲಕ ಕೋರಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್