Publish Date: Sun, 10 Apr 2022 (19:34 IST)
Updated Date: Sun, 10 Apr 2022 (19:45 IST)
ಇದು ಸಿನಿಮಾ ದೃಶ್ಯವನ್ನೂ ಮೀರಿಸುವಂತಹ ಚೇಸಿಂಗ್, ರೀಲ್ ಸ್ಟೋರಿಯನ್ನ ಸೈಡ್ಗೆ ತಳ್ಳಿ ರಿಯಲ್ ಆಗಿ 22 ಕಿಲೋ ಮೀಟರ್ ದೂರ ಚೇಸ್ ಮಾಡಿ ಜಾನುವಾರು ಕಳ್ಳರನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ದೆಹಲಿ ಬಳಿಯ ಗುರುಗ್ರಾಮ್‌ನಲ್ಲಿ ಈ ಘಟನೆ ನಡೆದಿದೆ. ಐವರು ಜಾನುವಾರು ಕಳ್ಳಸಾಗಾಣಿಕೆದಾರರನ್ನು 22 ಕಿ.ಮೀ ಬೆನ್ನಟ್ಟಿದ ನಂತರ ದೆಹಲಿಯ ಬಳಿಯ ಗುರುಗ್ರಾಮ್‌ನಲ್ಲಿ ಬಂಧಿಸಲಾಗಿದೆ. ಆರೋಪಿಗಳಿಂದ ಬಂದೂಕುಗಳು ಮತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿದ್ದ ವಾಹನದ ಒಂದು ಟೈರ್ ಪಂಕ್ಚರ್ ಆಗಿ, ಬರಿ ರಿಮ್ನ್ಲಲೇ ಅತಿವೇಗವಾಗಿ ಸುಮಾರು 22 ಕಿಲೋಮೀಟರ್ ದೂರ ಸಾಗಿದ್ದಾರೆ. ಪೊಲೀಸರಿಂದ ಬಚಾವಾಗಲು ವಾಹನದಲ್ಲಿದ್ದ ಹಸುಗಳನ್ನ ಹಂತಕರು ಹೊರ ಎಸೆದಿದ್ದಾರೆ ಎನ್ನಲಾಗಿದೆ.