Publish Date: Thu, 14 Jul 2022 (14:46 IST)
Updated Date: Thu, 14 Jul 2022 (14:50 IST)
ಬೆಂಗಳೂರಿನ ಈ ಪಾರ್ಕ್ನಲ್ಲಿ ಯಾರೂ ಜಾಗಿಂಗ್, ವಾಕಿಂಗ್ ಮಾಡುವಂತಿಲ್ಲ, ಬಲದಿಂದ ಎಡಕ್ಕೆ ಯಾರೂ ನಡೆಯುವಂತಿಲ್ಲ ಎಂದು ಬಿಬಿಎಂಪಿ ದೊಡ್ಡ ಬೋರ್ಡ್ ಹಾಕಿದೆ. ಇದರ ಫೋಟೋ ಈಗ ವೈರಲ್ ಆಗಿದೆ.
ಬೆಂಗಳೂರು: ಬೆಂಗಳೂರು ಉದ್ಯಾನನಗರಿ ಎಂಬ ಹೆಗ್ಗಳಿಕೆ ಪಡೆದಿರುವ ನಗರ.
ಪ್ರತಿ ಏರಿಯಾಗೂ ನಾಲ್ಕೈದು ಪಾರ್ಕ್ಗಳಿರುತ್ತವೆ. ಸಾಮಾನ್ಯವಾಗಿ ಭಾರತದ ಸಾರ್ವಜನಿಕ ಪಾರ್ಕ್ಗಳಲ್ಲಿ ಜನರಿಗೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ಅವರಿಗಾಗಿ ಸಮಯವನ್ನೂ ನಿಗದಿ ಮಾಡಲಾಗುತ್ತದೆ. ಬೆಳಗಿನ ವೇಳೆ ಜಾಗಿಂಗ್, ವಾಕಿಂಗ್ ಮಾಡುವವರಿಗೆ ಮತ್ತು ಸಂಜೆಯ ವೇಳೆ ವಾಕಿಂಗ್ ಮಾಡುವವರಿಗೆ ಪಾರ್ಕ್ಗಳ ಗೇಟ್ ಓಪನ್ ಮಾಡಲಾಗುತ್ತದೆ. ಆದರೆ, ಬೆಂಗಳೂರಿನ ಈ ಪಾರ್ಕ್ನಲ್ಲಿ ಯಾರೂ ಜಾಗಿಂಗ್, ವಾಕಿಂಗ್ ಮಾಡುವಂತಿಲ್ಲ, ಬಲದಿಂದ ಎಡಕ್ಕೆ ಯಾರೂ ನಡೆಯುವಂತಿಲ್ಲ ಎಂದು ಬಿಬಿಎಂಪಿ ದೊಡ್ಡ ಬೋರ್ಡ್ ಹಾಕಿದೆ. ಇದರ ಫೋಟೋ ಈಗ ವೈರಲ್ ಆಗಿದ್ದು, ಪಾರ್ಕ್ನಲ್ಲಿ ವಾಕಿಂಗ್ ಮಾಡಬಾರದು ಎಂದಾದರೆ ನಾಗಿಣಿ ಡ್ಯಾನ್ಸ್ ಮಾಡಬಹುದಾ? ಎಂದು ಲೇವಡಿ ಮಾಡಿದ್ದಾರೆ.
ಬೆಂಗಳೂರಿನ ಪಾರ್ಕ್ನ ಗೇಟ್ನಲ್ಲಿ ಹಾಕಿರುವ ಒಂದು ಫಲಕದ ಫೋಟೋ ಈಗ ವೈರಲ್ ಆಗಿದೆ. ಇಲ್ಲಿ ಜನರು ಆ್ಯಂಟಿ ಕ್ಲಾಕ್ವೈಸ್ (ಬಲದಿಂದ ಎಡಕ್ಕೆ) ನಡೆಯುವಂತಿಲ್ಲ, ವಾಕಿಂಗ್ ಮಾಡುವಂತಿಲ್ಲ, ಜಾಗಿಂಗ್ ಮಾಡುವಂತಿಲ್ಲ ಎಂದು ಬೋರ್ಡ್ ಹಾಕಲಾಗಿದೆ. ಹಾಗಿದ್ದರೆ ಈ ಪಾರ್ಕ್ನಲ್ಲಿ ಏನು ಮಾಡಬೇಕು? ಎಂಬುದು ಸದ್ಯಕ್ಕೆ ನೆಟ್ಟಿಗರ ಪ್ರಶ್ನೆಯಾಗಿದೆ. ಈ ಬೋರ್ಡ್ ಹಾಕುವ ಮೂಲಕ ಬಿಬಿಎಂಪಿ ಸಾಮಾಜಿಕ ಜಾಲತಾಣ ಬಳಕೆದಾರರ ಲೇವಡಿಗೆ ಗುರಿಯಾಗಿದೆ.