Publish Date: Mon, 04 Sep 2023 (15:50 IST)
Updated Date: Mon, 04 Sep 2023 (15:29 IST)
ಅನ್ನಭಾಗ್ಯದ ಅಕ್ಕಿ ಬದಲಿಗೆ ಹಣ ನೀಡಲು ಸರ್ಕಾರ ನಿರ್ಧರಿಸಿದ್ದು, ಈಗಾಗಲೇ ಒಂದು ತಿಂಗಳ ಲಕ್ಷಾಂತರ ಮಂದಿ ಈ ಯೋಜನೆ ಫಲಾನುಭವಿಗಳಾಗಿದ್ದು 5 ಕೆಜಿ ಅಕ್ಕಿಯ ಬದಲಿಗೆ ಹಣ ಪಡೆದಿದ್ದಾರೆ. ಆದ್ರೆ ಇನ್ನೂ ಲಕ್ಷಾಂತರ ಫಲಾನುಭವಿಗಳಿಗೆ DBT ತಲುಪಿಲ್ಲ, ಹೀಗಾಗಿ ಇಂದು ವಿಧಾನಸೌಧದಲ್ಲಿ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಸಭೆ ಕರೆದಿದ್ದು, ಈ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಅಂದಾಜು 39 ಲಕ್ಷ ಫಲಾನುಭವಿಗಳಿಗೆ ಹಣ ತಲುಪಿಲ್ಲ ಅನ್ನೋ ಮಾಹಿತಿ ತಿಳಿದುಬಂದಿದ್ದು, ಡಿಬಿಟಿ ಆಗದಿರಲು ಕಾರಣ ಏನು ಅಂತ ಚರ್ಚೆ ನಡೆಸಲಾಗ್ತಿದೆ. ಹೀಗಾಗಿ ಸಮಸ್ಯೆಗಳನ್ನ ಪರಿಹರಿಸಿ ಶೀಘ್ರದಲ್ಲೇ ಹಣ ವರ್ಗಾವಣೆ ಮಾಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.