Publish Date: Mon, 29 May 2017 (14:20 IST)
Updated Date: Mon, 29 May 2017 (14:26 IST)
ಬೆಂಗಳೂರು:ಮೇ-29: ಗೋ ಹಾಗೂ ಪ್ರಾಣಿ ಹತ್ಯೆಗೆ ನಿಷೇಧ ಹೇರಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕ್ರಮವನ್ನು ಖಂಡಿಸಿ ಕೇರಳದಲ್ಲಿ ನಡೆಸಿದ ರೀತಿಯಲ್ಲೇ ಬೆಂಗಳೂರಿನ ಟೌನ್ ಹಾಲ್ ಬಳಿ ಬೀಫ್ ಫೆಸ್ಟ್ ಮಾಡಲು ಮುಂದಾಗಿರುವ ಬೀಫ್ ಜನತಾ ಪಾರ್ಟಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.
ಕೇರಳದಲ್ಲಿ ವಿವಿಧ ಸಂಘಟನೆಗಳು ರಸ್ತೆ ಬದಿಯಲ್ಲೇ ಬೀಫ್ ತಯಾರಿಸಿ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಮೂಮೆಂಟ್ ಬೆಂಗಳೂರು ಹೆಸರಿನಲ್ಲಿ ಸಂಜೆ ಟೌನ್ ಹಾಲ್ ಬಳಿ ಬೀಫ್ ಫೆಸ್ಟ್ ನಡೆಸಲು ನಿರ್ಧರಿಸಲಾಗಿದ್ದು, ಇದಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಗೋಮಾಂಸ ನಿಷೇಧ ಪ್ರತಿಬ್ ಹಟಿಸಿ ಯಾವುದೇ ಪ್ರತಿಭಟನೆ ನಡೆಸಲು ಯಾರೂ ಅನುಮತಿ ಪಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತೀಯ ಗೋ ಪರಿವಾರ ಈ ಕಾರ್ಯಕ್ರಮವನ್ನು ತೀವ್ರವಾಗಿ ಖಂಡಿಸಿದ್ದು, ಪರ್ಯಾಯವಾಗಿ ಗೋ ಪೂಜೆ ಕಾರ್ಯಕ್ರಮ ಆಯೋಜಿಸುವುದಾಗಿ ತಿಳಿಸಿದೆ.