Select Your Language

Notifications

webdunia
webdunia
webdunia
webdunia

ನಟ ಅಕ್ಷಯ್ ಕುಮಾರ್-ಸೈನಾ ನೆಹ್ವಾಲ್‌ಗೆ ನಕ್ಸಲೀಯರ ಬೆದರಿಕೆ

ನಟ ಅಕ್ಷಯ್ ಕುಮಾರ್-ಸೈನಾ ನೆಹ್ವಾಲ್‌ಗೆ ನಕ್ಸಲೀಯರ ಬೆದರಿಕೆ
ರಾಯ್ಪುರ್ , ಸೋಮವಾರ, 29 ಮೇ 2017 (13:55 IST)
ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್‌ಗೆ ನಕ್ಸಲೀಯರು ಬೆದರಿಕೆಯೊಡ್ಡಿದ್ದಾರೆ.
 
ನಕ್ಸಲೀಯರ ವಿರುದ್ಧದ ಎನ್‌ಕೌಂಟರ್‌ನಲ್ಲಿ ಮೃತರಾದ ಯೋಧರಿಗೆ ಆರ್ಥಿಕ ನೆರವು ನೀಡುವ ಬದಲಿಗೆ ಬಡವರಿಗೆ ನೆರವಾಗಿ ಎಂದು ನಕ್ಸಲೀಯರು, ನಟ ಅಕ್ಷಯ್ ಮತ್ತು ಸೈನಾಗೆ ಬೆದರಿಕೆ ಹಾಕಿದ್ದಾರೆ.  
 
ನಿಷೇಧಿತ ಸಿಪಿಐ(ಮಾವೋವಾದಿ) ಸಂಘಟನೆ ಬಸ್ತಾರ್ ಮತ್ತು ಚತ್ತೀಸ್‌ಗಢ್‌ ರಾಜ್ಯದಲ್ಲಿ ಕರಪತ್ರಗಳನ್ನು ಹಂಚಿದ್ದು, ಸೆಲೆಬ್ರೆಟಿಗಳು, ಗಣ್ಯವ್ಯಕ್ತಿಗಳು ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿ ತುಳಿತಕ್ಕೊಳಗಾದ ಬುಡಕಟ್ಟು ಸಮುದಾಯದ ಜನತೆಗೆ ನೆರವಾಗಿ ಎಂದು ಕರಪತ್ರದಲ್ಲಿ ಉಲ್ಲೇಖಿಸಲಾಗಿದೆ.  
 
ಗಮನಾರ್ಹ ವಿಷಯವೆಂದರೆ, ಕಳೆದ ಮಾರ್ಚ್ ತಿಂಗಳಲ್ಲಿ ಸುಕುಮಾ ಅರಣ್ಯ ಪ್ರದೇಶದಲ್ಲಿ ನಕ್ಸಲೀಯರೊಂದಿಗೆ ನಡೆದ ಘರ್ಷಣೆಯಲ್ಲಿ ಮೃತರಾದ 12 ಯೋಧರ ಕುಟುಂಬಗಳಿಗೆ ನಟ ಅಕ್ಷಯ್ ಕುಮಾರ್ ತಲಾ 9 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡಿದ್ದರು.
 
ಅಕ್ಷಯ್ ಕುಮಾರ್ ನಂತರ ಯೋಧರಿಗೆ ನೆರವಾಗಲು ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಕೂಡಾ ತಲಾ ಒಬ್ಬೊಬ್ಬ ಯೋಧರಿಗೆ 50 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರಪತಿ ಹುದ್ದೆಗೇರಲು ಆಸಕ್ತಿಯಿಲ್ಲ: ಎಚ್.ಡಿ.ದೇವೇಗೌಡ