Select Your Language

Notifications

webdunia
webdunia
webdunia
webdunia

ಅಮಿತ್‌ ಶಾ ರಂತಹವರಿಂದ ಪಾಠ ಕಲಿಯಬೇಕಾಗಿಲ್ಲ: ಸಿಎಂ ತಿರುಗೇಟು

ಅಮಿತ್‌ ಶಾ ರಂತಹವರಿಂದ ಪಾಠ ಕಲಿಯಬೇಕಾಗಿಲ್ಲ: ಸಿಎಂ ತಿರುಗೇಟು
ಬೆಂಗಳೂರು , ಗುರುವಾರ, 2 ನವೆಂಬರ್ 2017 (18:20 IST)
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಂತಹವರಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯ ನಮಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದ್ದೇವೆ. ಟಿಪ್ಪು ಸುಲ್ತಾನ್ ಜಯಂತಿ ಒಂದೇ ಆಚರಿಸುವುದಿಲ್ಲ. 26 ಮಹಾನ್ ಪುರುಷರ ಜಯಂತಿ ಕೂಡಾ ಅಷ್ಟೇ ವಿಜೃಂಭಣೆಯಿಂದ ಆಚರಿಸುತ್ತೇವೆ ಇಂದು ಟಾಂಗ್ ನೀಡಿದ್ದಾರೆ.
 
ಇದು ಪರಿವರ್ತನೆ ಯಾತ್ರೆಯಲ್ಲ ತೀರ್ಥಯಾತ್ರೆ. ಮಾಡಿದ ಪಾಪಗಳಿಗೆ ಪ್ರಾಯಶ್ಚಿತ ಮಾಡಿಕೊಳ್ಳುವಂತಹ ಯಾತ್ರೆ. ಬಿಜೆಪಿಯವರು ಕೋಮುವಾದಿಗಳು ಎಂದು ಟೀಕಿಸಿದ್ದಾರೆ.
 
ಪರಿವರ್ತನೆ ಯಾತ್ರೆ ಮೊದಲ ದಿನವೇ ಫ್ಲಾಪ್ ಆಗಿದೆ. 3 ಲಕ್ಷ ಜನ ಸೇರುತ್ತಾರೆ ಎಂದು ಬಿಜೆಪಿಯವರು ಹೇಳಿದ್ದರು. ಆದರೆ, ಕೇವಲ 20 ಸಾವಿರ ಜನ ಮಾತ್ರ ಸೇರಿದ್ದರು. ಕುರ್ಚಿಗಳು ಖಾಲಿ ಖಾಲಿಯಾಗಿರುವುದು ನೋಡಿದಲ್ಲಿ ಬಿಜೆಪಿ ನಾಯಕರಿಗೆ ತಮ್ಮ ಪ್ರಭಾವದ ಅರಿವಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ದಯಾನಂದ ಸ್ವಾಮಿ ರಾಸಲೀಲೆ ಪ್ರಕರಣ: ಮನನೊಂದು ನಟಿ ಆತ್ಮಹತ್ಯೆಗೆ ಯತ್ನ?