Select Your Language

Notifications

webdunia
webdunia
webdunia
webdunia

ಆಟೋ ಚಾಲಕರಿಗೆ ಹೊಸ ರೂಲ್ಸ್: ಇನ್ಮುಂದೆ ಆಟೋ ಹಿಂದೆ ಹೀಗೆಲ್ಲಾ ಬರೆಯೋ ಹಾಗಿಲ್ಲ

Auto riksha

Krishnaveni K

ಬೆಂಗಳೂರು , ಗುರುವಾರ, 23 ಜನವರಿ 2025 (12:39 IST)
Photo Credit: Instagram
ಬೆಂಗಳೂರು: ಆಟೋ ಹಿಂದೆ ಸಿನಿಮಾ ಸ್ಟಾರ್ ಗಳು ಲಾಂಗ್, ಮಚ್ಚು ಹಿಡಿದುಕೊಂಡು ನಿಂತಿರುವ ಫೋಟೋಗಳನ್ನು ಹಾಕಿಕೊಳ್ಳುವವರು ಎಷ್ಟೋ ಮಂದಿಯಿದ್ದಾರೆ. ಆದರೆ ಇನ್ನು ಮುಂದೆ ಇದಕ್ಕೆಲ್ಲಾ ಕತ್ತರಿ ಬೀಳಲಿದೆ.

ಆಟೋ ಹಿಂದೆ ಸಿನಿಮಾ ನಟರ ಸಿನಿಮಾ ಪೋಸ್ಟರ್ ಗಳನ್ನು ಹಾಕಿಕೊಳ್ಳುವಾಗ ಕೆಲವೊಂದು ನಿಯಮಗಳನ್ನು ಪಾಲಿಸುವುದು ಕಡ್ಡಾಯ ಎಂದು ಸಾರಿಗೆ ಇಲಾಖೆ ಆದೇಶಿಸಿದೆ. ವಾಹನಗಳ ಮೇಲೆ ನೆಚ್ಚಿನ ನಟರ ಫೋಟೋ ಹಾಕಿ ಆದರೆ ಯಾವುದೇ ಹಿಂಸಾತ್ಮಕ ಫೋಟೋ ಹಾಕಬಾರದು ಎಂದಿದೆ.

ವಿಶೇಷವಾಗಿ ನಟರು ಲಾಂಗ್, ಮಚ್ಚು, ಗನ್ ಹಿಡಿದಿರುವ, ಗುಟ್ಕಾ ಸೇವಿಸುವಂತಹ ಹಾನಿಕಾರಕ ಫೋಟೋಗಳನ್ನು ಹಾಕುವಂತಿಲ್ಲ ಎಂದು ಸಾರಿಗೆ ಇಲಾಖೆ ಸೂಚನೆ ನೀಡಿದೆ. ಇಂತಹ ಫೋಟೋಗಳನ್ನು ಹಾಕಿದರೆ ಇನ್ನು ಮುಂದೆ ದಂಡ ಬೀಳಲಿದೆ.

ಇನ್ನು ಮುಂದೆ ಆಯಾ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಇನ್ನು ಮುಂದೆ ಇಂತಹ ವಾಹನಗಳ ಪರಿಶೀಲನೆ ನಡೆಸಲಿದ್ದಾರೆ. ಆಶ್ಲೀಲ ಮತ್ತು ಅಸಭ್ಯ ಸಂದೇಶ, ಫೋಟೋ ಇರುವ ಫೋಟೋಗಳನ್ನು ಆಟೋ ಮೇಲೆ ಹಾಕಿಕೊಂಡರೆ ದಂಡ ಪ್ರಯೋಗ ಮಾಡಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಿರುಪತಿ ದೇಗುಲದಲ್ಲಿ ಕಾಲ್ತುಳಿತ ಪ್ರಕರಣ: ಎರಡು ವಾರಗಳ ಬಳಿಕ ನ್ಯಾಯಾಂಗ ತನಿಖೆಗೆ ಆದೇಶ